ಕಲಘಟಗಿ ಪಟ್ಟಣದ ಆಂಜನೇಯ ಸರ್ಕಲ್ ಬಳಿ ರಸ್ತೆಯಲ್ಲಿ ಮೆಕ್ಕೆಜೋಳ ಸುರಿದು ಬಿಜೆಪಿ ವತಿಯಿಂದ ಶುಕ್ರವಾರ ಪ್ರತಿಭಟನೆ (Protest )ನಡೆಸಲಾಯಿತು. ನಾಗರಾಜ ಛಬ್ಬಿ, ನಿಂಗಪ್ಪ ಸುತಗಟ್ಟಿ, ಯಲ್ಲಾರಿ ಶಿಂಧೆ, ರವಿ ಅಲ್ಲಾಪೂರ, ಗೀತಾ ಮರಲಿಂಗಣ್ಣವರ, ಐ.ಸಿ. ಗೋಕುಲ, ಇತರರಿದ್ದರು.
- ಕಲಘಟಗಿಯಲ್ಲಿ ಖರೀದಿ ಕೇಂದ್ರ ತೆರೆಯಲು ಒತ್ತಾಯ
- ತಹಸೀಲ್ದಾರ್‌ಗೆ ರೈತರು ಹಾಗೂ ಬಿಜೆಪಿ ಕಾರ್ಯಕರ್ತರ ಮನವಿ
- ಸಚಿವರ ಮನೆ ಮುಂದೆ ಪ್ರತಿಭಟನೆ
ಕಲಘಟಗಿ: ಸರ್ಕಾರ ಮೆಕ್ಕೆಜೋಳಕ್ಕೆ ಘೋಷಿಸಿರುವ ಬೆಂಬಲ ಬೆಲೆ ನೀಡುವುದು ಮತ್ತು ಖರೀದಿ ಕೇಂದ್ರ ಸ್ಥಾಪನೆ ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಪಟ್ಟಣದ ಆಂಜನೇಯ ಸರ್ಕಲ್ ಬಳಿ ಶುಕ್ರವಾರ ವಾಹನ ಸಂಚಾರ ತಡೆದು ರಸ್ತೆಯಲ್ಲೇ ಮೆಕ್ಕೆಜೋಳ ಸುರಿದು ಪ್ರತಿಭಟನೆ (Protest) ನಡೆಸಿದರು.
ಪಟ್ಟಣದ ಎಪಿಎಂಸಿಯಿಂದ ರೈತರು ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ನಿಗದಿಪಡಿಸಿದ 2400 ರೂ. ನೀಡಬೇಕು. ತಾಲೂಕಿನಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾದರೂ ಕಲಘಟಗಿ ಕ್ಷೇತ್ರವನ್ನು ಮರೆತಿರುವುದು ಖಂಡನೀಯ.
ಆದ್ದರಿಂದ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಇನ್ನೊಮ್ಮೆ ತಾಲೂಕಿನಲ್ಲಾದ ಬೆಳೆ ಹಾನಿ ವರದಿಯನ್ನು ಸಿದ್ಧಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ಕಲಘಟಗಿ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾದ ಅಭ್ಯರ್ಥಿಗೆ ಕಲಘಟಗಿ ನೆನಪಿಗೆ ಬರಲ್ಲ. ಇನ್ನೂ ರೈತರ ಪರಿಸ್ಥಿತಿ ಏನು?. ಎರಡು ದಿನಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸದಿದ್ದರೆ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕಾಧ್ಯಕ್ಷ ಯಲ್ಲಾರಿ ಶಿಂಧೆ, ರವಿ ಅಲ್ಲಾಪೂರ, ಗೀತಾ ಮರಲಿಂಗಣ್ಣವರ, ಐ.ಸಿ ಗೋಕುಲ, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ಅಣ್ಣಪ್ಪ ಓಲೇಕಾರ, ಗಂಗಾಧರ ಗೌಳಿ, ಸದಾನಂದ ಚಿಂತಾಮಣಿ, ಪರಶುರಾಮ ರಜಪೂತ, ಶಿವಲಿಂಗಪ್ಪ ಯಲಿವಾಳ, ಮಂಜುಳಾ ನಾಯಕ, ಬಸವರಾಜ ಶೆರೇವಾಡ, ಬಸವರಾಜ ಸಣ್ಣಪೂಜಾರ, ಕಲ್ಲಪ್ಪ ಪುಟ್ಟಪ್ಪನವರ, ಚಂದ್ರಗೌಡ ಪಾಟೀಲ, ಶಶಿಧರ ಹುಲಿಕಟ್ಟಿ, ನಾಗಪ್ಪ ಕಣಕಪ್ಪನವರ, ವಿಜಯಲಕ್ಷ್ಮೀ ಆಡಿನವರ, ದಾವಲ್ ನದಾಫ್, ಶ್ರೀಕಾಂತ ಪಾಟೀಲ, ಫಕೀರೇಶ ನೇಸರೇಕರ್ ಇತರರಿದ್ದರು.