(protest) ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳದಲ್ಲಿ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಗ್ರಾಪಂ ಪದಾಧಿಕಾರಿಗಳು, ಅಧಿಕಾರಿಗಳು.
- ರೇವಡಿಹಾಳ ಆಶ್ರಯ ನಿವೇಶನ ಹಂಚಿಕೆಗೆ ಒತ್ತಾಯ
- ಹಂಚಿಕೆ ಮಾಡಿದ್ದ ನಿವೇಶನಗಳ ರದ್ದು
ದೇವರಗುಡಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರೇವಡಿಹಾಳದಲ್ಲಿ ಆಶ್ರಯ ಬಡಾವಣೆ ನಿರ್ಮಾಣವಾದ ನಂತರ ಅನರ್ಹರಿಗೆ ಹಾಗೂ ಗ್ರಾಮದವರಲ್ಲದವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ಹಲವು ವರ್ಷಗಳಿಂದ ಗ್ರಾಮಸ್ಥರು ಹೋರಾಟ ಕೈಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ರೇವಡಿಹಾಳ ಗ್ರಾಮಸ್ಥರು ಗುರುವಾರ ದೇವರಗುಡಿಹಾಳ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದರು.
ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಗ್ರಾಮಸಭೆ ಕರೆಯುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಡಿ. 16ರಂದು ಸಭೆ
ಸರ್ವೇ ನಂಬರ್ 24, 73, 84/1ರಲ್ಲಿ ರದ್ದಾಗಿರುವ ನಿವೇಶನಗಳಿಗೆ ಎದುರಾಗಿ ಹೊಸದಾಗಿ 196 ಅರ್ಹ ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಲುವಾಗಿ ಡಿ. 16ರಂದು ಬೆಳಗ್ಗೆ 11.30ಕ್ಕೆ ರೇವಡಿಹಾಳ ಬಸ್ ನಿಲ್ದಾಣ ಬಳಿಯ ಉದ್ಯಾನದಲ್ಲಿ ವಿಶೇಷ ಗ್ರಾಮ ಸಭೆ ಕರೆಯಲಾಗಿದೆ ಎಂದು ಅಧ್ಯಕ್ಷೆ ಖಾತುನಬಿ ಲಾಡಸಾಬನವರ ತಿಳಿಸಿದ್ದಾರೆ.
ಪ್ರಕರಣ ಏನು?