ಧಾರವಾಡ: ನಗರದ ಕೆಸಿಡಿ ಮಹಾವಿದ್ಯಾಲಯದಲ್ಲಿ ಪ್ರವೇಶ ಶುಲ್ಕ ಹೆಚ್ಚಳ ಖಂಡಿಸಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾಥಿರ್ಗಳು ಪ್ರತಿಭಟಿಸಿದರು.
ಧಾರವಾಡ: ನಗರದ ಕೆಸಿಡಿ ಮಹಾವಿದ್ಯಾಲಯದ ಬಿಎಸ್ಸಿ ಹಾಗೂ ಬಿಸಿಎ ವಿದ್ಯಾಥಿರ್ಗಳಿಗೆ ಏಕಾಏಕಿ ಕಾಲೇಜಿನ ಪ್ರವೇಶಾತಿ ಶುಲ್ಕ ಹೆಚ್ಚಳ ಮಾಡಿರುವುದನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ಗುರುವಾರ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾಥಿರ್ಗಳು ಪ್ರತಿಭಟಿಸಿದರು.
ಈ ವೇಳೆ ಎಐಡಿಎಸ್ಒ ಜಿಲ್ಲಾ ಕಾರ್ಯದಶಿರ್ ಶಶಿಕಲಾ ಮೇಟಿ ಮಾತನಾಡಿ, ಪ್ರಸಕ್ತ ವರ್ಷದಿಂದ ಕೆಸಿಡಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ಕೋರ್ಸ್ಗಿದ್ದ 6,699 ರೂ. ಕಾಲೇಜು ಶುಲ್ಕವನ್ನು 13,112 ರೂ. ಏರಿಸಲಾಗಿದೆ. 6,413 ರೂ. ಹೆಚ್ಚಿಸಲಾಗಿದೆ. ಬಿಸಿಎ ಕೋರ್ಸ್ಗೆ 25,000 ರೂ. ನಿಂದ 34,522 ರೂ.ಗೆ ಏರಿಕೆ ಮಾಡಿದ್ದು, 9,522 ರೂ. ಹೆಚ್ಚಾಗಿದೆ.
ಎಷ್ಟೋ ವಿದ್ಯಾಥಿರ್ಗಳು ಕಾಲೇಜು ಶುಲ್ಕ ಹೆಚ್ಚಳದಿಂದ ಶುಲ್ಕ ಪಾವತಿಸಿಲ್ಲ. ಶುಲ್ಕ ಏರಿಕೆಯಿಂದ ವಿದ್ಯಾಥಿರ್ಗಳಿಗೆ ಆತಂಕವಾಗಿದೆ. ಶಿಣದಿಂದ ಹೊರಗುಳಿಯುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಶುಲ್ಕ ಏರಿಕೆ ಹಿಂಪಡೆಯಬೇಕು ಹಾಗೂ ಈಗಾಗಲೇ ಶುಲ್ಕ ಏರಿಕೆಯ ಮೊತ್ತ ಪಾವತಿಸಿರುವ ವಿದ್ಯಾಥಿರ್ಗಳಿಗೆ ಮರು ಪಾವತಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಕಾಲೇಜು ಪ್ರಾಚಾರ್ಯ ಎಂ.ಎಸ್. ಸಾಳುಂಕೆ ಅವರಿಗೆ ಮನವಿ ಸಲ್ಲಿಸಿದರು.
ಸಂಟನೆ ಜಿಲ್ಲಾಧ್ಯೆ ಸಿಂಧು ಕೌದಿ, ಸಂಟನಾಕಾರರಾದ ಶಾಂತೇಶ ನಂದಿಕೋಲ್ಮಟ್, ಸಿದ್ದು ಚಿಪ್ಪಲಕಟ್ಟಿ ಹಾಗೂ ವಿದ್ಯಾಥಿರ್ಗಳು ಇದ್ದರು.