ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ನಿರಂತರ ಕಳಸಾ ಬಂಡೂರಿ ಹೋರಾಟ ಸಮಿತಿ ವತಿಯಿಂದ ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಅಣ್ಣಿಗೇರಿ: ರಾಜೀವ್ ಗಾಂಧಿ ವಸತಿ ನಿಗಮದ ಕೊನೆ ಕಂತಿನ ಹಣ ಬಿಡುಗಡೆ ಮಾಡಬೇಕು ಮತ್ತು ಊರಿನ ಒಳ ಚರಂಡಿ ನಿರ್ಮಾಣ ಮಾಡಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ನಿರಂತರ ಕಳಸಾ ಬಂಡೂರಿ ಹೋರಾಟ ಸಮಿತಿ ವತಿಯಿಂದ ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡ ನಿಂಗಪ್ಪ ಬಡ್ಡೆಪ್ಪನವರ, ಪಂಪ ಉತ್ಸವ ಅಣ್ಣಿಗೇರಿಯಲ್ಲಿಯೇ ಆಗಬೇಕು. ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು, ವಸತಿ ಯೋಜನೆಗಳು ನೈಜ ಫಲಾನುಭವಿಗಳಿಗೆ ದೊರೆಯಬೇಕು ಎಂದರು.
ನಂತರ ಪುರಸಭೆ ಉಪಾಧ್ಯಕ್ಷ ನಾಗಪ್ಪ ದಳವಾಯಿ, ಮುಖ್ಯಾಧಿಕಾರಿ ವೈಜಿ ಗದ್ದಿಗೌಡರ ಮಾತನಾಡಿ, ಎಲ್ಲ ಬೇಡಿಕೆಗಳನ್ನು ಎರಡು ತಿಂಗಳಲ್ಲಿ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟ ಕೈಬಿಟ್ಟರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಘಟಕದ ಅಧ್ಯಕ್ಷ ಡಿ.ಬಿ. ನರಗುಂದ, ಪಂಚಾಕ್ಷರಿ ಬಿಳೇಬಾಳ, ವಿನೋದಗೌಡ ಬರಮಗೌಡ್ರು, ರವಿರಾಜ ವೆರ್ಣೇಕರ, ರಂಗಾರೆಡ್ಡಿ ಹನುಮಂತಪ್ಪ ಉಣಕಲ್, ದಾವಲ್ಸಾಬ್ ಕುರಹಟ್ಟಿ, ರಾಘು ಅಮಾಗಿ ಇತರರಿದ್ದರು.