ಪ್ರೊ. ದೇವರಾಜನ್​ ತಂಗುದೊರೈ 
ಧಾರವಾಡ

ಪ್ರೊ. ದೇವರಾಜನ್​ ತಂಗುದೊರೈ ಅಮಾನತು

ಮಂಜುನಾಥ ಅಂಗಡಿ
ಧಾರವಾಡ: ಸಸ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸೇರಿ ಇತರ ಸಂಶೋಧನಾರ್ಥಿಗಳಿಗೆ ಕಿರುಕುಳ ನೀಡಿದ ಪ್ರೊ. ದೇವರಾಜನ್​ ತಂಗುದೊರೈ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯ ಸೇವೆಯಿಂದ ಅಮಾನತು ಮಾಡಿದೆ. ತಂಗುದೊರೈ ವಿರುದ್ಧ ಆರೋಪ ಕೇಳಿ ಬಂದ ನಂತರ ನೋಟಿಸ್​ ಜಾರಿ ಮಾಡಲಾಗಿತ್ತು. ಆದರೆ, ಪ್ರೊ. ತಂಗುದೊರೈ ನೀಡಿದ್ದ ವಿವರಣೆ ಸಮಂಜಸವಾಗಿರಲಿಲ್ಲ. ಆದ್ದರಿಂದ ಸಿಂಡಿಕೇಟ್​ ಸಭೆಯ ದೃಢೀಕರಣಕ್ಕೊಳಪಟ್ಟು ಅಮಾನತು ಮಾಡಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.