prize ವಿದ್ವಾನ್ ಪ್ರೊ. ಶ್ರೀರಾಮ ವಿಠ್ಠಲಾಚಾರ್ಯ.
- ಬೆಂಗಳೂರಿನ ವಿದ್ವಾನ್ ಪ್ರೊ. ಶ್ರೀರಾಮ ವಿಠ್ಠಲಾಚಾರ್ಯ
- ಉತ್ತರಾರಾಧನೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ
ಹುಬ್ಬಳ್ಳಿ: prize ನಗರದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಸಮಯದಲ್ಲಿ ಕೊಡಮಾಡುವ ರಾಜ್ಯಮಟ್ಟದ "ಪಂಡಿತ ಪಂಡರಿನಾಥಾಚಾರ್ಯ ಗಲಗಲಿ' 2026ನೇ ಸಾಲಿನ ಪ್ರಶಸ್ತಿಗೆ ಬೆಂಗಳೂರಿನ ಹಿರಿಯ ವಿದ್ವಾನ್ ಪ್ರೊ. ಶ್ರೀರಾಮ ವಿಠ್ಠಲಾಚಾರ್ಯ ಅವರು ಆಯ್ಕೆಯಾಗಿದ್ದಾರೆ.
ಉಡುಪಿ ಅದೋಕ್ಷಜ ಮಠದ ಪೇಜಾವರ ಶ್ರೀವಿಶ್ವೇಶತೀರ್ಥರ ಗರಡಿಯಲ್ಲಿ ಬೆಳೆದ ಇವರು ಶಾಸ್ತ್ರ ಅಭ್ಯಾಸ, ವೇದಾಧ್ಯಯನ, ಸಮಗ್ರ ಸುಧಾ ಗ್ರಂಥ ಅಧ್ಯಯನ ಮಾಡಿದ್ದಾರೆ. ಪಂಡಿತ ಗಲಗಲಿ ಆಚಾರ್ಯರೊಂದಿಗೆ ಕಳೆದ ಮೂವತ್ತು ವರ್ಷಗಳಿಂದ ಒಡನಾಡಿಗಳು, ಅವರು ಬರೆದ ಗ್ರಂಥಗಳ ವಿಶೇಷವಾಗಿ ಅಧ್ಯಯನ ಹಾಗೂ ಅವಲೋಕನ ಮಾಡಿದ್ದಾರೆ.
ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪಿಠದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿ, ಈಗ ನಿವೃತ್ತಿ ಹೊಂದಿದ್ದಾರೆ.ದಾಸ ಸಾಹಿತ್ಯ ಮತ್ತು ವ್ಯಾಸ ಸಾಹಿತ್ಯದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಗಲಗಲಿ ಆಚಾರ್ಯರ ಪುತ್ರ ಪಂ. ವಾಸುದೇವಚಾರ್ಯ ಗಲಗಲಿ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಸಮಿತಿ ಅಧ್ಯಕ್ಷ ವಿಷ್ಣುತಿರ್ಥ ಕಲ್ಲೂರಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯು 10ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಶಾಲು ಹಾಗೂ ಸ್ಮರಣ ಫಲಕ ಒಳಗೊಂಡಿದೆ. ಆಗಸ್ಟ್ 31ರಂದು ಹುಬ್ಬಳ್ಳಿಯ ವಿಶ್ವೇಶ್ವರನಗರದ ರಾವೇಂದ್ರ ಸ್ವಾಮಿ ವೃಂದಾವನ ಸನ್ನಿಧಿಯಲ್ಲಿ ನಡೆಯುವ ಉತ್ತರಾರಾಧನೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.