ಮಹಾನಗರ ಪಾಲಿಕೆ ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಪೌರ ಕಾರ್ವಿುಕರ ದಿನಾಚರಣೆಯಲ್ಲಿ ಪೌರ ಕಾರ್ವಿುಕರನ್ನು ಸನ್ಮಾನಿಸಲಾಯಿತು.  
ಧಾರವಾಡ

ಪೌರ ಕಾರ್ವಿುಕರ ಕಲ್ಯಾಣಕ್ಕೆ ಆದ್ಯತೆ

ಪೌರ ಕಾರ್ವಿುಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ

ಹುಬ್ಬಳ್ಳಿ: ಪೌರಕಾರ್ವಿುಕರ ಆರೋಗ್ಯ, ಸುರಕ್ಷತೆ, ಆರ್ಥಿಕ ಭದ್ರತೆ ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ಆದ್ಯತೆ ನೀಡುವ ಮೂಲಕ ಅವರ ಸೇವೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಹಾನಗರ ಪಾಲಿಕೆ ಡಾ. ರುದ್ರೇಶ ಘಾಳಿ ಹೇಳಿದರು.

ಪೌರ ಕಾರ್ವಿುಕರ ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಪೌರಕಾರ್ವಿುಕರು ಸಲ್ಲಿಸುತ್ತಿರುವ ಅಮೂಲ್ಯ ಸೇವೆ ಗುರುತಿಸಿ, ಮುಂದಿನ ದಿನಗಳಲ್ಲಿಯೂ ಅವರ ಕಲ್ಯಾಣಕ್ಕಾಗಿ ಮತ್ತಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪೌರಕಾರ್ವಿುಕರಿಗೆ ವಿವಿಧ ಕಾಲಬದ್ಧ ವೇತನ ಬಡ್ತಿ ಸೌಲಭ್ಯಗಳಡಿ ಒಟ್ಟು 44 ಪ್ರಕರಣಗಳನ್ನು ಮಂಜೂರು ಮಾಡಲಾಗಿದೆ. ಅನುಕಂಪದ ಆಧಾರದ ಮೇಲೆ ಒಟ್ಟು 16 ಪ್ರಕರಣಗಳಲ್ಲಿ ನೇಮಕಾತಿ ಮಾಡಲಾಗಿದೆ. ಒಟ್ಟು 35 ಪೌರಕಾರ್ವಿುಕರ ಜಮಾದಾರ ಹುದ್ದೆಗಳನ್ನು ಪದೋನ್ನತಿ ಮೂಲಕ ಭರ್ತಿ ಮಾಡಲಾಗಿದೆ. 126 ಹೊರಗುತ್ತಿಗೆ ಪೌರಾಕಾರ್ವಿುಕರಿಗೆ ನೇರ ನೇಮಕಾತಿ ಮಾಡಲಾಗಿದೆ ಎಂದು ಹೇಳಿದರು.

ಪೌರಕಾರ್ವಿುಕರಿಗೆ ಸೆಪ್ಟೆಂಬರ್ ಮಾಸದಲ್ಲಿ 7 ಸಾವಿರ ರೂ. ವಿಶೇಷ ಭತ್ಯೆ ನೀಡಲಾಗಿದೆ. 2025ರ ಏಪ್ರಿಲ್​ನಿಂದ ಜಾರಿಯಾಗುವಂತೆ ಪೌರಕಾರ್ವಿುಕರಿಗೆ ಪ್ರತಿ ತಿಂಗಳು 2 ಸಾವಿರ ರೂ. ಸಂಕಷ್ಟ ಭತ್ಯೆ ನೀಡಲಾಗುತ್ತಿದೆ.

ಪೌರಕಾರ್ವಿುಕರಿಗೆ ಉಪಹಾರ ಭತ್ಯೆಯನ್ನು ನಗದು ರೂಪದಲ್ಲಿ ನೀಡಲಾಗುತ್ತಿದೆ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪೌರ ಕಾರ್ವಿುಕರನ್ನು ಸನ್ಮಾನಿಸಲಾಯಿತು. ಪಾಲಿಕೆ ಉಪ ಆಯುಕ್ತರಾದ ಅನುರಾಧ ವಸ್ತ್ರದ, ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಹಿರಿಯ ಅಧಿಕಾರಿಗಳಾದ ವಿಜಯಕುಮಾರ ಆರ್., ಸಂತೋಷ ಯರಂಗಾಳಿ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಪ್ರಸಾದ ಪೆರೂರ, ವಲಯಾಧಿಕಾರಿ ಗಿರೀಶ ತಳವಾರ, ಮಲ್ಲಿಕಾರ್ಜುನ ಸಬರದ, ಚಂದ್ರಶೇಖರ ಮಾಲಿಪಾಟೀಲ ಹಾಗೂ ಇತರರಿದ್ದರು.