printing press ಹುಬ್ಬಳ್ಳಿಯ ಹೂಬಳ್ಳಿ ಲೇಖಕಿಯರ ಬಳಗದವರು ವರೂರಿನ ವಿಜಯವಾಣಿ ಪ್ರಿಂಟಿಂಗ್ ಪ್ರೆಸ್ಗೆ ಭೇಟಿ ನೀಡಿದರು.
- ಲೇಖಕಿಯರ ತಂಡಕ್ಕೆ ನವೀನ ಅನುಭವ
- ವಿಜಯವಾಣಿ ಪ್ರಿಂಟಿಂಗ್ ಯೂನಿಟ್ ನೋಡಿ ಖುಷಿ
ಹುಬ್ಬಳ್ಳಿ: printing press ಇಲ್ಲಿಯ ಹೂಬಳ್ಳಿ ಲೇಖಕಿಯರ ಬಳಗದ ಸದಸ್ಯರು ವರೂರಿನ ವಿಜಯವಾಣಿ ಪ್ರಿಂಟಿಂಗ್ ಪ್ರೆಸ್ಗೆ ಭೇಟಿ ನೀಡಿ ಹೊಸ ಹಾಗೂ ವಿಶೇಷ ಅನುಭವ ಪಡೆದರು.
ಮುದ್ರಣ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು, ಹೊಸ ತಂತ್ರಜ್ಞಾನಗಳನ್ನು ನೋಡಿ ಖುಷಿ ಪಟ್ಟರು. ಬಳಗದ ಸದಸ್ಯರು ಅತ್ಯಂತ ಕುತೂಹಲದಿಂದ ಮುದ್ರಣದ ಬಗ್ಗೆ ಮಾಹಿತಿ ತಿಳಿದುಕೊಂಡರು.
ತಾವು ಸ್ವತಃ ಲೇಖಕಿಯರಾಗಿದ್ದು, ನಾವು ಕೂಡ ಲೇಖನಗಳನ್ನು ಬರೆಯುತ್ತೇವೆ. ಹೀಗೆ ಬರೆದ ಅಕ್ಷರಗಳು ಹೇಗೆ ಪ್ರಿಂಟ್ ಆಗುತ್ತವೆ ಎಂಬುದನ್ನು ಕಣ್ಣಾರೆ ಕಂಡಿದ್ದು ಅತ್ಯಂತ ಖುಷಿಯ ಸಂಗತಿ ಎಂದು ಹೇಳಿದರು.
ಪ್ರಿಂಟಿಂಗ್ ವಿಭಾಗದ ವಿವಿಧ ಘಟಕಗಳಿಗೆ ಭೇಟಿ ನೀಡಿ ವೀಕ್ಷಿಸುತ್ತ ವೇಗದ ಮುದ್ರಣ, ಕಲರ್ಗಳ ಬಳಕೆ ಮುಂತಾದ ವಿಷಯಗಳನ್ನು ಅರಿತರು.