prerana felicitation ಹುಬ್ಬಳ್ಳಿಯ ಪ್ರೇರಣಾ ಪಪೂ ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಂಜುನಾಥ ಮುನವಳ್ಳಿ, ಸಂದೀಪ ಬೂದಿಹಾಳ, ಪ್ರೊ. ಕುಮಾರಸ್ವಾಮಿ ಮೇವುಂಡಿಮಠ, ಹನುಮಂತಪ್ಪ ಡಿ. ಇತರರು ಇದ್ದರು. 
ಧಾರವಾಡ

prerana felicitation ಉತ್ತಮ ಹವ್ಯಾಸಗಳಿಂದ ಕಲಿಕೆ ಸುಲಭ

ಪ್ರಮುಖ ಮುಖ್ಯಾಂಶಗಳು

  • ಆತ್ಮವಿಶ್ವಾಸ ಸಾಧಿಸುವ ಛಲ ಇರಲಿ
  • ಪ್ರೇರಣಾ ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಹುಬ್ಬಳ್ಳಿ:
ಪ್ರಾಚಾರ್ಯ ಪ್ರೊ. ಕುಮಾರಸ್ವಾಮಿ ಮೇವುಂಡಿಮಠ ಮಾತನಾಡಿ, ಈ ಬಾರಿ ಕಾಲೇಜಿನ ವಿದ್ಯಾರ್ಥಿಗಳು ಒಳ್ಳೆಯ ಫಲಿತಾಂಶ ನೀಡಿದ್ದಾರೆ. 79 ವಿದ್ಯಾರ್ಥಿಗಳು ಸನ್ಮಾನ ಸ್ವೀಕರಿಸಿದ್ದಾರೆ. ಇದಕ್ಕೆ ಮಹಾವಿದ್ಯಾಲಯದ ಶಿಕ್ಷಕ ವೃಂದ, ಪಾಲಕರು ಹಾಗೂ ವಿದ್ಯಾರ್ಥಿಗಳ ಸಹಕಾರ ಕಾರಣ ಎಂದರು.
ನಿಮ್ಮ ಪರಿಸ್ಥಿತಿಗಳು ನಿಮ್ಮ ಭವಿಷ್ಯವನ್ನು ರೂಪಿಸುವುದಿಲ್ಲ. ಹೊರತಾಗಿ ಹವ್ಯಾಸಗಳು ನಿಮ್ಮ ಭವಿಷ್ಯವನ್ನು ರೂಪಿಸುತ್ತವೆ. ಹಾಗಾಗಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಎತ್ತರಕ್ಕೆ ಏರಬೇಕು ಎಂದರು.
ಅತಿಥಿಗಳಾಗಿದ್ದ ನಲವಡಿಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಹನುಮಂತಪ್ಪ ಡಿ. ಅವರು, ಸನ್ಮಾನಗೊಂಡ ವಿದ್ಯಾರ್ಥಿಗಳ ಸಾಧನೆ ಕಂಡು ಸಂತಸವಾಯಿತು. ಇಂತಹ ಯಶಸ್ಸಿಗೆ ಶಿಕ್ಷಕರು ಹಾಗೂ ಪಾಲಕರ ಬೆಂಬಲ, ಮಾರ್ಗದರ್ಶನ ಕಾರಣ. ಪಾಲಕರ ತ್ಯಾಗವನ್ನು ಎಂದಿಗೂ ಮರೆಯಬಾರದು. ಆತ್ಮವಿಶ್ವಾಸ ಹಾಗೂ ಸಾಧಿಸುವ ಛಲವಿದ್ದರೆ ಭವಿಷ್ಯತ್ತಿನಲ್ಲಿ ಮಹತ್ತರವಾದ ಸ್ಥಾನ ಗಳಿಸಲು ಸಾಧ್ಯ ಎಂದರು.
ಸಾಧನೆಗೈದ ವಿದ್ಯಾರ್ಥಿಗಳಿಗೆ ಟ್ರೋಫಿ, ಶಲ್ಯ, ಪದಕ ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು.
ಕೆಎಸ್​ಎಸ್​ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಸಂದೀಪ ಬೂದಿಹಾಳ, ಅಧ್ಯತೆ ವಹಿಸಿದ್ದ ಕೆಎಲ್​ಇ ನಿರ್ದೇಶಕ ಎಂ.ಎಸ್. ಮುನವಳ್ಳಿ ಮಾತನಾಡಿದರು. ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.