ಹುಬ್ಬಳ್ಳಿಯ ಕಿತ್ತೂರ ಚನ್ನಮ್ಮ ವೃತ್ತದ (Prayer)ಬಳಿಯ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಮ್ು ಗುರುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. 
ಧಾರವಾಡ

ಬಕ್ರೀದ್, (Prayer) ಸಾಮೂಹಿಕ ಪ್ರಾರ್ಥನೆ

ಸಂತೋಷ ವೈದ್ಯ
ಹುಬ್ಬಳ್ಳಿ: ತ್ಯಾಗ, ಬಲಿದಾನದ (Prayer) ಸಂಕೇತವಾದ ಬಕ್ರೀದ್ ಹಬ್ಬದ ನಿಮಿತ್ತ ನಗರದ ವಿವಿಧೆಡೆ ಮುಸ್ಲಿಮ್ು ಗುರುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬೆಳಗ್ಗೆ ಹೊಸ ಉಡುಗೆ ಧರಿಸಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಪರಸ್ಪರ ಅಲಂಗಿಸಿಕೊಂಡು ಹಬ್ಬ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು ಹೊಸ ಪೋಷಾಕಿನಲ್ಲಿ ಗಮನ ಸೆಳೆದರು. ನಗರದ ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ 30 ಸಾವಿರಕ್ಕೂ ಹೆಚ್ಚು ಮುಸ್ಲಿಮ್ು ಸೇರಿದ್ದರು.
ಇಲ್ಲಿ ಬಕ್ರೀದ್ ಹಬ್ಬದ ಸಂದೇಶ ನೀಡಿದ ಧರ್ಮಗುರು, ಫತೇಶಾವಲಿ ದರ್ಗಾ ಮಸೀದಿಯ ಮುಫ್ತಿ ಮೌಲಾನಾ ಅಬ್ದುಲ್ ಸುಭಾನ್, ತ್ಯಾಗ, ಬಲಿದಾನ ನೆನಪಿಸುವ ಹಬ್ಬವೇ ಬಕ್ರೀದ್. ಪ್ರತಿಯೊಬ್ಬರು ಈ ಹಬ್ಬದ ಮಹತ್ವ ಅರಿತು ಸಹಬಾಳ್ವೆಯಿಂದ ಬಾಳಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬ ಮುಸಲ್ಮಾನ ಪರೋಪಕಾರದ ಮನೋಭಾವನೆ ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಒಳ್ಳೆಯ ಕಾರ್ಯಗಳಾಗಲು ಸಾಧ್ಯ ಎಂದರು.

ಈದ್ಗಾ ಮೈದಾನದ ಸುತ್ತ ಹಾಗೂ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಎಸ್​ಐಆರ್ ಕುರಿತು ಜಾಗೃತಿ
ಪ್ರಾರ್ಥನೆಯ ಪೂರ್ವ ಮಾತನಾಡಿದ ಮಾಜಿ ಸಚಿವ, ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್) ಕುರಿತು ಎಲ್ಲ ಮಸೀದಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಸದಾನಂದ ಡಂಗನವರ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ, ಪಾಲಿಕೆ ಸದಸ್ಯ ಇಲಿಯಾಸ ಮನಿಯಾರ, ದಾದಾಹಯಾತ ಖೈರಾತಿ, ಸಿರಾಜ ಅಹ್ಮದ ಕುಡಚಿವಾಲೆ, ವಹಾಬ್ ಮುಲ್ಲಾ, ಯೂಸೂಫ ಸವಣೂರ, ರಫೀಕ ಬಂಕಾಪುರ, ಇತರರು ಇದ್ದರು.