PRATIBA KARANJI ಉಪ್ಪಿನಬೆಟಗೇರಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಬುಧವಾರ ಜರುಗಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಗುವೊಂದು ಛದ್ಮ ವೇಷ ತೊಟ್ಟು ಗಮನ ಸೆಳೆಯಿತು. 
ಧಾರವಾಡ

PRATIBA KARANJI ಮಕ್ಕಳ ಅಭಿರುಚಿಗೆ ಪ್ರತಿಭಾ ಕಾರಂಜಿ ವೇದಿಕೆ

ರವಿ ಎಸ್. ಬಳೂಟಗಿ

ಪ್ರಮುಖ ಮುಖ್ಯಾಂಶಗಳು

  • ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
  • ಛದ್ಮ ವೇಷ ತೊಟ್ಟು ಗಮನ ಸೆಳೆದ ಮಕ್ಕಳು
  • ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಉಪ್ಪಿನಬೆಟಗೇರಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆ (PRATIBA KARANJI) ಗುರುತಿಸಿ ಅವರಿಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲಾ ಪಂಚಾಯಿತಿ ಸಹೋಗದೊಂದಿಗೆ ಪ್ರತಿಭಾ ಕಾರಂಜಿ ಆಯೋಜಿಸುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿ ಸಹಕರಿಸಬೇಕು ಎಂದು ಸ್ಥಳೀಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರವೀಣ ಓಂಕಾರಿ ಹೇಳಿದರು.
ಗ್ರಾಮದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸುಮಾರು 10 ರಿಂದ 15 ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ನಿರ್ಣಾಯಕರು, ಅತಿಥಿಗಳು ಪಾಲ್ಗೊಂಡಿರುತ್ತಾರೆ. ಇಂತಹ ಕಾರ್ಯಕ್ರಮ ಆಯೋಜನೆಗೆ ಶಿಕ್ಷಣ ಇಲಾಖೆಯು 5 ರಿಂದ 10 ಸಾವಿರ ರೂ. ಅನುದಾನ ನೀಡಿದರೆ ಸಾಲದು, ಕಾರ್ಯಕ್ರಮದ ಯಶಸ್ವಿಗೆ ಎಷ್ಟು ಅನುದಾನದ ಅಗತ್ಯವೋ ಅಷ್ಟನ್ನಾದರೂ ಇಲಾಖೆ ನೀಡಬೇಕು. ಸ್ಥಳೀಯ ಎಸ್ಡಿಎಂಸಿ ಕಮಿಟಿಯವರು ಬೇರೆ ಬೇರೆ ದಾನಿಗಳ ಮೂಲಕ ಹಣ ಸಂಗ್ರಹಿಸಿ ಕಾರ್ಯಕ್ರಮ ಮಾಡುವ ಪರಿಸ್ಥಿತಿ ಬಂದಿರುವುದು ಬೇಸರದ ಸಂಗತಿ ಎಂದರು.
ಗ್ರಾಪಂ ಅಧ್ಯಕ್ಷ ಬಸೀರ್ ಅಹ್ಮದ್ ಮಾಳಗಿಮನಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ನಿಜಗುಣಿ ಹೂಲಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಛಾಯಾ ಹೆಗಡೆ, ಪಿಕೆಪಿಎಸ್ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ, ಉಪಾಧ್ಯಕ್ಷ ವೀರಣ್ಣಾ ಪರಾಂಡೆ, ಮಂಜುನಾಥ ಸಂಕಣ್ಣವರ, ಮಲ್ಲಣ್ಣ ಅಷ್ಟಗಿ, ಜಿ.ಆರ್. ಜವಳಗಿ, ಶಿವಪ್ಪ ವಿಜಾಪೂರ, ಸಿಆರ್‌ಪಿ ಹೇಮಲತಾ ಢಗೆ, ಸುರೇಶಬಾಬು ತಳವಾರ, ಗಂಗಪ್ಪ ತಳವಾರ ಇತರರಿದ್ದರು. ಕಾರ್ಯಕ್ರಮದಲ್ಲಿ 16 ಶಾಲೆಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.