ಪ್ರಮೋದ ಮುತಾಲಿಕ್ 
ಧಾರವಾಡ

ಪ್ರೊ. ಭಗವಾನ್​ ನಾಲಿಗೆ ಸೀಳುತ್ತೇವೆ: ಪ್ರಮೋದ ಮುತಾಲಿಕ್​ ತಿರುಗೇಟು

ಧಾರವಾಡ: ಶ್ರೀರಾಮ ಮರ್ಯಾದಾ ಪುರುಷೋತ್ತಮ. ಶ್ರೀರಾಮನ ಜನ್ಮದ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿರುವ ಪ್ರೊ. ಕೆ.ಎಸ್​. ಭಗವಾನ್​ ಅವರ ನಾಲಿಗೆ ಸೀಳಬೇಕಾಗುತ್ತದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್​ ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಪ್ರೊ. ಭಗವಾನ್​ ಆಗಾಗ ಹಿಂದೂ ಧರ್ಮ, ದೇವರು ಮತ್ತು ಶ್ರೀರಾಮನ ಬಗ್ಗೆ ಆಗಾಗ ಅವಹೇಳನ ಮಾಡುತ್ತಲೇ ಇದ್ದಾರೆ. ಬೇರೆಯವರ ಹುಟ್ಟಿನ ಬಗ್ಗೆ ಮಾತನಾಡುವ ಭಗವಾನ್​, ಯಾವ ತಂದೆಗೆ ಹುಟ್ಟಿದ್ದಾರೆ ಎಂಬುದನ್ನು ಮೊದಲು ಹೇಳಬೇಕು. ಅವರ ಅಪ್ಪನಿಗೇ ಹುಟ್ಟಿದ ಬಗ್ಗೆ ಸಾ ಕೊಡಬೇಕು. ಈ ಬೂಟಾಟಿಕೆಯನ್ನು ಬಿಡದಿದ್ದರೆ ಶ್ರೀರಾಮ ಸೇನೆಯಿಂದ ಮನೆಗೆ ನುಗ್ಗಿ ಹೊಡೆಯುವ ಕಾಲ ಬರುತ್ತದೆ ಎಂದು ಆಕ್ರೋಶದಿಂದ ನುಡಿದರು.