Kamadevaru 
ಧಾರವಾಡ

Kamadevaru ಕಾಮದೇವರ ದರ್ಶನ ಪಡೆದ ಪ್ರಲ್ಹಾದ್ ಜೋಶಿ

ನವಲಗುಂದ: ಸ್ಥಳಿಯ ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗ ಕಾಮದೇವರ (Kamadevaru) ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ದರ್ಶನಾಶೀರ್ವಾದ ಪಡೆದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶತಮಾನಗಳಿಂದಲೂ ಶ್ರೀ ರಾಮಲಿಂಗ ಕಾಮದೇವರು ಬೇಡಿದ ವರವ ನೀಡುವ ಕಾಮಧೇನು ಕಲ್ಪವೃಕ್ಷ ಎಂಬುದು ಭಕ್ತರ ನಂಬಿಕೆಯಾಗಿದೆ. ಇಲ್ಲಿ ಬರುವ ಲಕ್ಷಾಂತರ ಭಕ್ತರು ತಮ್ಮ ಮನೋಭಿಲಾಷೆಗಳ ಈಡೇರಿಕೆಗಾಗಿ ಹರಕೆ ಹೊರುವ ಪದ್ಧತಿ ಇದೆ. ಭಕ್ತರ ಹರಕೆ ಈಡೇರಿರುವುದರಿಂದ ನಾಡಿನೆಲ್ಲೆಡೆಯಿಂದ ಭಕ್ತ ಸಮೂಹ ಕಾಮದೇವರ ದರ್ಶನಕ್ಕೆ ಬರುತ್ತದೆ. ನಾನೂ ಹಲವಾರು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ ಎಂದರು.
ಇದೇ ಸಂದರ್ಭದಲ್ಲ್ಲಿ ದೇವಸ್ಥಾನದ ಪರವಾಗಿ ಟ್ರಸ್ಟ್‌ನ ಕಾರ್ಯದರ್ಶಿ ಯಲ್ಲಪ್ಪ ಭೋವಿ ಅವರು ಸಚಿವರನ್ನು ಸತ್ಕರಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ, ಮುಖಂಡರಾದ ಬಸವರಾಜ ಕುಂದಗೋಳಮಠ, ದೇವರಾಜ ದಾಡಿಭಾವಿ, ಅಣ್ಣಪ್ಪ ಬಾಗಿ, ಎನ್.ಪಿ. ಕುಲಕರ್ಣಿ, ಬಸವರಾಜ ಕಾತರಕಿ, ಐ.ಡಿ. ಪ್ರಭುಗೌಡ, ಸಂತೋಷ ನಾವಳ್ಳಿ, ವೀರಣ್ಣ ಚವಡಿ, ಶಶಿಧರ ಭರತಭೋಜನಮಠ, ಲಿಂಗರಾಜ ಕುರಟ್ಟಿ, ದೇವೇಂದ್ರಪ್ಪ ಹಳ್ಳದ ಮತ್ತಿತರರು ಉಪಸ್ಥಿತರಿದ್ದರು.