prakash joshi ನೂತನವಾಗಿ ಆರಂಭಿಸಿರುವ ಶ್ರೀ ದತ್ತಾ ಭಜನಾ ಮಂಡಳಿಯನ್ನು ಶ್ರೀ ದತ್ತಾ ಇನ್‌ಫ್ರಾಟೆಕ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಜೋಶಿ ಅವರು ಹುಬ್ಬಳ್ಳಿಯ ಶ್ರೀ ದತ್ತಾ ನಿವಾಸದಲ್ಲಿ ಗುರುವಾರ ಉದ್ಘಾಟಿಸಿದರು. 
ಧಾರವಾಡ

prakash joshi ಶ್ರೀದತ್ತ ಸ್ಮರಣೆಯಿಂದ ಸಂಕಟ ದೂರ

ಹುಬ್ಬಳ್ಳಿ: ನೂತನವಾಗಿ ಆರಂಭಿಸಿರುವ ಶ್ರೀ ದತ್ತಾ ಭಜನಾ ಮಂಡಳಿಯನ್ನು prakash joshi ಇಲ್ಲಿಯ ಮಂಜುನಾಥ ನಗರದ ಶ್ರೀ ದತ್ತಾ ನಿವಾಸದಲ್ಲಿ ಗುರುವಾರ ಉದ್ಘಾಟಿಸಲಾಯಿತು.
ಶ್ರೀ ದತ್ತಾ ಇನ್‌ಫ್ರಾಟೆಕ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಜೋಶಿ ಉದ್ಘಾಟಿಸಿ ಮಾತನಾಡಿ, ಶ್ರೀದತ್ತರ ಸ್ಮರಣೆ ಇಂದಿನ ದಿನಗಳಲ್ಲಿ ಅತ್ಯಗತ್ಯವಿದೆ. ಭವಪಾಶ ನಾಶ ಮಾಡುವ ಶಕ್ತಿ ದತ್ತರಿಗಿದೆ. ಅವರ ಹೆಸರಲ್ಲಿ ಭಜನಾ ಮಂಡಳಿ ಸ್ಥಾಪನೆ ಮಾಡಿರುವುದು ಶ್ಲಾಘನೀಯ. ಪ್ರತಿ ಗುರುವಾರ ಒಂದೊಂದು ಮನೆಯಲ್ಲಿ ನಡೆಯಲಿರುವ ಭಜನಾ ಕಾರ್ಯಕ್ರಮಕ್ಕೆ ನಮ್ಮ ಸಹಕಾರವಿದೆ ಎಂದರು.
ನಂತರ ಭಜನಾ ಕಾರ್ಯಕ್ರಮ ನಡೆಯಿತು.
ಭಜನಾ ಮಂಡಳಿ ಸದಸ್ಯರಾದ ಉಮಾ ನಾಡಗೀರ, ಲಕ್ಷ್ಮೀ ಜೋಶಿ, ಗೀತಾ ಸುಂಕದ, ಸುಧಾ ವೈದ್ಯ, ನಂದಿನಿ ಜೋಶಿ, ಸುಮಾ ನಾಯಕ್ ಇತರರಿದ್ದರು.