ಹುಬ್ಬಳ್ಳಿ ಕೆಎಲ್​ಇ Polymer Science) ತಾಂತ್ರಿಕ ವಿಶ್ವ ವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್ ಸೈನ್ಸ್ ಸ್ ವತಿಯಿಂದ ಆಯೋಜಿಸಿರುವ ಭಾರತೀಯ ರಸಾಯನಶಾಸ್ತ್ರಜ್ಞರ ಮಂಡಳಿಯ 44ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮಂಗಳವಾರ ಪಾಲಿಮರ್ ಸೈನ್ಸ್ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ. ವೀರೇಂದ್ರ ಗುಪ್ತಾ, ಡಾ. ತೇಜರಾಜ ಅಮೀನಭಾವಿ, ಪ್ರೊ. ಆನಂದ ಹಲಗೇರಿ, ಪ್ರೊ. ರಂಜಿತ ವರ್ವ, ಇತರರು ಇದ್ದರು. 
ಧಾರವಾಡ

ಪಾಲಿಮರ್ (Polymer Science) ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ

ಸಂತೋಷ ವೈದ್ಯ
ಹುಬ್ಬಳ್ಳಿ: ಪ್ರಸಕ್ತ ವರ್ಷಕ್ಕೆ Polymer Science) ಸುಮಾರು 400 ಮಿಲಿಯನ್ ಟನ್​ಗಳಷ್ಟು ಪಾಲಿಮರ್ ಬೇಡಿಕೆ ಇದೆ. 2050ರ ವೇಳೆಗೆ ಇದು 1200 ಮಿಲಿಯನ್ ಟನ್​ಗಳಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಜಾಗತಿಕವಾಗಿ ಪಾಲಿಮರ್ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್​ನ ಹಿರಿಯ ಉಪಾಧ್ಯಕ್ಷ (ಆರ್ ಆಂಡ್ ಡಿ, ಪಾಲಿಮರ್ಸ್) ಡಾ. ವೀರೇಂದ್ರ ಗುಪ್ತಾ ಹೇಳಿದರು.
ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವ ವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್ ಸೈನ್ಸ್ ಸ್ ವತಿಯಿಂದ ಆಯೋಜಿಸಿರುವ ಭಾರತೀಯ ರಸಾಯನಶಾಸ್ತ್ರಜ್ಞರ ಮಂಡಳಿ (ಐಸಿಸಿ)ಯ 44ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮಂಗಳವಾರ ಪಾಲಿಮರ್ ಸೈನ್ಸ್ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪಾಲಿಮರ್​ಗಳು ದೈನಂದಿನ ಜೀವನ, ವಾಹನೋದ್ಯಮ, ವಿಮಾನಯಾನ ಮತ್ತು ಅಂತರಿಕ್ಷ ತಂತ್ರಜ್ಞಾನದಲ್ಲಿಯೂ ಅವಿಭಾಜ್ಯವಾಗಿವೆ. ಇತ್ತೀಚಿನ ದಶಕಗಳಲ್ಲಿ ಮರು ಬಳಕೆ ಮತ್ತು ಸುಸ್ಥಿರ ಪಾಲಿಮರ್ ತಂತ್ರಜ್ಞಾನಗಳತ್ತ ಮಹತ್ವ ಹೆಚ್ಚಾಗಿದೆ ಎಂದು ತಿಳಿಸಿದರು.
ಪಾಲಿಮರ್ ವಿಜ್ಞಾನದಲ್ಲಿ ಇತ್ತೀಚಿನ ಪ್ರಗತಿಗಳು ಮತ್ತು ಸುಧಾರಿತ ಪಾಲಿಮರ್ ವಸ್ತುಗಳು ಎಂಬ ವಿಷಯದ ಕುರಿತು ಮಾತನಾಡಿದ ಬೆಂಗಳೂರಿನ ಪೂರ್ಣಪ್ರಜ್ಞಾ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಪೊ›. ಆನಂದ ಹಲಗೇರಿ, ಮೊದಲು ಭಾರತ ಪಾಲಿಮರ್ ಆಮದು ಮಾಡಿಕೊಳ್ಳುತ್ತಿದ್ದವು. ದೇಶೀಯವಾಗಿ ಉತ್ಪಾದನೆ ಮಾಡಿ ಇದೀಗ ರಫ್ತು ಮಾಡುವ ಸ್ಥಿತಿಗೆ ಭಾರತ ಬಂದಿದೆ. ಕಳೆದ ಐದು ದಶಕಗಳಲ್ಲಿ ಪ್ರಯೋಗಾಲಯ ಮಟ್ಟದ ಸಂಶೋಧನೆಗಳು ವಾಣಿಜ್ಯ ತಂತ್ರಜ್ಞಾನಗಳಾಗಿ ರೂಪಾಂತರಗೊಂಡಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್​ಇ ತಾಂತ್ರಿಕ ವಿಶ್ವ ವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್ ಸೈನ್ಸ್ ಸ್​ನ ಸಂಶೋಧನಾ ನಿರ್ದೇಶಕ ಪೊ›. ತೇಜರಾಜ ಅಮೀನಭಾವಿ ಮಾತನಾಡಿ, ಸುಸ್ಥಿರತೆ, ಸುಧಾರಿತ ಮತ್ತು ಇಂಧನ ಸಂಬಂಧಿತ ಪಾಲಿಮರ್ ಗಳು ಇಂದಿನ ಜಾಗತಿಕ ಆದ್ಯತೆಗಳಾಗಿವೆ ಎಂದು ಹೇಳಿದರು.
ಐಸಿಸಿ ಅಧ್ಯಕ್ಷ ಪೊ›. ರಂಜಿತ ವರ್ವ ವಂದಿಸಿದರು.