ಹುಬ್ಬಳ್ಳಿಯ ಪಿರಮಿಡ್ (piramid) ಧ್ಯಾನ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಧ್ಯಾನ ಕಾರ್ಯಕ್ರಮವನ್ನು ಪಿರಮಿಡ್ ಕಾರ್ಯದರ್ಶಿ ನೀಲಕಂಠ ಆಕಳವಾಡಿ, ಸೀನಿಯರ್ ಪಿರಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ ಉದ್ಘಾಟಿಸಿದರು. 
ಧಾರವಾಡ

(piramid) ಧ್ಯಾನದಿಂದ ಮನಸ್ಸಿಗೆ ನೆಮ್ಮದಿ, ಸಂತೋಷ

ಹುಬ್ಬಳ್ಳಿ: ವಿಶ್ವಧ್ಯಾನ ದಿನಾಚರಣೆ ನಿಮತ್ತ ಇಲ್ಲಿಯ ನೃಪತುಂಗ ಬೆಟ್ಟದ ರಸ್ತೆಯಲ್ಲಿರುವ ಹುಬ್ಬಳ್ಳಿ ಪಿರಮಿಡ್ (piramid) ಧ್ಯಾನ ಮಂದಿರದಲ್ಲಿ ದಿನವಿಡೀ ಧ್ಯಾನ, ಸತ್ಸಂಗ ಕಾರ್ಯಕ್ರಮಗಳು ಭಾನುವಾರ ಜರುಗಿದವು.
ಪಿರಮಿಡ್ ಧ್ಯಾನ ಮಂದಿರ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಮಾತನಾಡಿ, ಯೋಗಾಸನವು ಬಹಿರಂಗ ಯೋಗವಾದರೆ, ಧ್ಯಾನವು ಅಂತರಂಗದ ಯೋಗ. ಧ್ಯಾನದಿಂದ ಮನುಷ್ಯನ ಆಲೋಚನಾ ಶಕ್ತಿ, ಭಾವನಾ ಶಕ್ತಿ ಮತ್ತು ಇಚ್ಛಾಶಕ್ತಿಗಳು ಒಂದೇ ದಿಕ್ಕಿನಲ್ಲಿ ಹರಿದು ಏಕಾಗ್ರತೆ ಮೂಡುವುದು. ಅದರಿಂದ ಮನಸ್ಸಿಗೆ ನೆಮ್ಮದಿ, ಸಂತಸ ಮತ್ತು ಉಲ್ಲಾಸ ಉಂಟಾಗಲಿದೆ. ಬೆಳಗ್ಗೆ ಧ್ಯಾನ ಮಾಡುವ ರೂಢಿಯಿಟ್ಟುಕೊಂಡರೆ ಇಡೀ ದಿನವೆಲ್ಲ ಚಟುವಟಿಕೆಯಿಂದಿರಲು ಸಾಧ್ಯ ಎಂದರು.
ಗದಗಿನ ಸೀನಿಯರ್ ಪಿರಮಿಡ್ ಮಾಸ್ಟರ್ ವಿದ್ಯಾರಾಣಿ ಕೂಬಳ್ಳಿ ಮಾತನಾಡಿ, ಮಧುಮೇಹ, ಅಧಿಕ ರಕ್ತದೊತ್ತಡ, ಬೆನ್ನು ನೋವು, ಹಲ್ಲು ನೋವು ಮೊದಲಾದವುಗಳಿಂದ ಬಳಲುತ್ತಿದ್ದಾಗ ಧ್ಯಾನವು ಅವುಗಳ ಉಪಶಮನಕ್ಕೆ ನೆರವು ನೀಡಿತು ಎಂದು ಅನುಭವಗಳನ್ನು ಹಂಚಿಕೊಂಡರು.
ಸೀನಿಯರ್ ಪಿರಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಸುಭಾಷ ಪತ್ರೀಜಿ ಅವರ ಧ್ಯಾನ ಕಾರ್ಯಾಗಾರದಲ್ಲಿ ಪಾಲ್ಗೊಂಡು ಧ್ಯಾನದ ಮಹತ್ವ ಅರಿತೆ. ಆ ಮೇಲೆ ಹುಬ್ಬಳ್ಳಿ ಪಿರಮಿಡ್ ಕೇಂದ್ರದಲ್ಲಿ ಸಾವಿರಾರು ಜನರಿಗೆ ಧ್ಯಾನ ತರಬೇತಿ ನೀಡುತ್ತಿದ್ದು, ಅವರೆಲ್ಲ ನಿತ್ಯ ಧ್ಯಾನವನ್ನು ತಪ್ಪದೆ ಮಾಡಿ ಮನಸ್ಸಿಗೆ ಸಮಾಧಾನವಲ್ಲದೇ ರೋಗಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದರು.
ಗದಗಿನ ಸೀನಿಯರ್ ಪಿರಮಿಡ್ ಮಾಸ್ಟರ್ ನೇತ್ರಾವತಿ ಕಟಗೇರಿ ಮಾತನಾಡಿದರು.
ಧ್ಯಾನ ಮಂದಿರ ಉಪಾಧ್ಯಕ್ಷ ಚನ್ನು ಹೊಸಮನಿ, ಕಾರ್ಯದರ್ಶಿ ನೀಲಕಂಠ ಆಕಳವಾಡಿ, ಸುರೇಶ ಶೆಟ್ಟರ್, ಲಲಿತ್ ಶಾ, ಈಶ್ವರ ವಾಂಗಿ, ಜೀವನ ವಸ್ತ್ರದ ಉಪಸ್ಥಿತರಿದ್ದರು. ಅನಿತಾ ಇರಕಲ್ ನಿರೂಪಿಸಿದರು.