ಧಾರವಾಡ ವಿದ್ಯಾರಣ್ಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ 
ಧಾರವಾಡ

ದುಡ್ಡಿನ ಸಂಪಾದನೆಗಿಂತ ಮನಶಾಂತಿ ಮುಖ್ಯ

ಧಾರವಾಡ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕು. ದುಡ್ಡಿನ ಸಂಪಾದನೆಗಿಂತ ಮನಶಾಂತಿ ಮುಖ್ಯ. ನಮ್ಮೊಳಗೆ ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರಹಾಕಲು ಅವಕಾಶ ಸಿಕ್ಕಾಗ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ, ಹಿರಿಯ ಕಲಾವಿದ ಬಿ. ಮಾರುತಿ ಸಲಹೆ ನೀಡಿದರು.
ನಗರದ ವಿದ್ಯಾರಣ್ಯ ಪಪೂ ಮಹಾವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಗೀತ, ನೃತ್ಯ ಚಿತ್ರಕಲೆ, ಶಿಲ್ಪಕಲೆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಗುರಿ ಸಾಧಿಸಲು ನಿರಂತರ ಪ್ರಯತ್ನ ಮತ್ತು ಸಮಯ ಪರಿಪಾಲನೆ ಅಗತ್ಯ ಎಂದರು.
ಅತಿಥಿಯಾಗಿ ಆಗಮಿಸಿದ್ದ ಕೆ.ಇ. ಬೋರ್ಡ್ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸುನಿತಾ ಕಡಪಟ್ಟಿ ಮಾತನಾಡಿ, ಇಂದಿನ ಯುವಕರೇ ನಾಳಿನ ನಾಗರಿಕರು. ವಿದ್ಯಾರ್ಥಿಗಳು ಈಗಿನಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇಂದಿನ ಯುಗದಲ್ಲಿ ಸ್ಪರ್ಧಾತ್ಮಕ ಮನೋಭಾವ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ ಗವ್ಹರ್ನಿಂಗ್ ಕೌನ್ಸಿಲ್ ಚೇರ್ಮನ್ ರಾಜು ಪಾಟೀಲ ಕುಲಕರ್ಣಿ, ವಿದ್ಯಾರ್ಥಿಗಳು ಸದಾಕಾಲ ಜಾಗೃತರಾಗಿರಬೇಕು. ಸುಪ್ತವಾಗಿರುವ ತಮ್ಮ ಪ್ರತಿಭೆಗಳನ್ನು ಕಾಲ ಕಾಲಕ್ಕೆ ಹೊರ ಹಾಕಬೇಕು. ಗುರು-ಹಿರಿಯರಿಗೆ ಗೌರವ ನೀಡಬೇಕು. ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಶರಣಮ್ಮ ಗೊರೇಬಾಳ ಸ್ವಾಗತಿಸಿದರು. ಡಾ. ಭರತ ನಾಯಕ ವಿದ್ಯಾರ್ಥಿ ಪ್ರತಿನಿಽಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಶ್ವೇತಾ ನಾಯಕ, ಪ್ರದಿಪ ಪಾಟಿಲ ವೇದಿಕೆಯಲ್ಲಿದ್ದರು. ಪ್ರಿಯಾಂಕಾ ಅಂಕಲಿ ನಿರೂಪಿಸಿದರು. ಸದಾನಂದ ಶಿಂತ್ರೆ ವಂದಿಸಿದರು.