peace meeting ಹುಬ್ಬಳ್ಳಿಯಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀ ಗಣೇಶ ಹಬ್ಬದ ಸೌಹಾರ್ದ ಸಭೆಯನ್ನು ಧಾರವಾಡ ರಾಮಕೃಷ್ಣ ಆಶ್ರಮದ ಮುಖ್ಯಸ್ಥ ವಿಜಯಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.
- ಹು-ಧಾ ಪೊಲೀಸ್ ಆಯುಕ್ತ ಭೂಷಣ ಬೋರಸೆ ಎಚ್ಚರಿಕೆ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯಲಿರುವ peace meeting ಶ್ರೀ ಗಣೇಶೋತ್ಸವದ ಮೆರವಣಿಗೆ ವೇಳೆ ಎಲ್ಲ ರೀತಿಯ ಬಿಗಿ ಕಾವಲು ಹಾಕಲಾಗುತ್ತಿದೆ. ದಸರಾ ಮಾದರಿಯಲ್ಲಿ ಹುಬ್ಬಳ್ಳಿಯ ಗಣೇಶೋತ್ಸವವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲಿ ಎಂಬ ಉದ್ದೇಶ ಹೊಂದಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಭೂಷಣ ಬೋರಸೆ ಹೇಳಿದರು.
ಹು-ಧಾ ಪೊಲೀಸ್ ಆಯುಕ್ತಾಲಯ ವತಿಯಿಂದ ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀ ಗಣೇಶ ಹಬ್ಬದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮದ್ಯೆ ಕುಡಿದು ರಸ್ತೆ ಮೇಲೆ ಓಡಾಡಲು ಬಿಡುವುದಿಲ್ಲ. ಕೇಸ್ ಹಾಕುತ್ತೇವೆ. ಅಮಲು ಪದಾರ್ಥ ಸೇವನೆ ಪತ್ತೆಗೆ ನಾರ್ಕೋಟಿಕ್ ಕಿಟ್ ತರುತ್ತೇವೆ. ಪಟಾಕಿ ಸಿಡಿಸಿ ಜನರ ಮೇಲೆ ಯಾರಾದರೂ ಎಸೆದರೆ ಸಾರ್ವಜನಿಕರು ಫೋಟೋ ನಮಗೆ ಕಳುಹಿಸಿದರೆ ಅವರ ಮೇಲೆ ಪ್ರಕರಣ ದಾಖಲಿಸುತ್ತೇವೆ. ರಾಕೆಟ್ ಬಿಡುತ್ತೇವೆ ಎಂದರೆ ಅನುಮತಿಸುವುದಿಲ್ಲ. ಮಹಿಳೆಯರ ಸುರಕ್ಷತೆಗಾಗಿ ಹೋಮ್ ಗಾರ್ಡ್ ಜತೆಗೆ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.
ಬೆಳಗಾವಿಯಲ್ಲಿ ನಮ್ಮ ಇಲಾಖೆಯಿಂದ ವೆಬ್‌ಸೈಟ್ ಸಿದ್ಧಪಡಿಸಿದ್ದೆವು. ಯಾವ ಪ್ರದೇಶದಲ್ಲಿ ಗಣೇಶ ಮೂರ್ತಿಗಳಿವೆ? ಇವುಗಳಿಗೆ ಹೋಗುವ ಮಾರ್ಗ, ಪಾರ್ಕಿಂಗ್ ಸ್ಥಳ ಸೇರಿದಂತೆ ಸಾರ್ವಜನಿಕರಿಗೆ ಎಲ್ಲ ರೀತಿಯ ಮಾಹಿತಿ ಕೊಡುತ್ತಿತ್ತು. ಇದೇ ಮಾದರಿ ಹುಬ್ಬಳ್ಳಿಯಲ್ಲಿ ಅಳವಡಿಸುವ ಚಿಂತನೆ ಇದೆ. ವಾಚ್ ಟಾವರ್ ಹಾಗೂ ಕ್ಯಾಮರಾ ಅಳವಡಿಕೆ, ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರಲಾಗುವುದು. 80 ಡೆಸಿಬಲ್‌ಗಿಂತ ಹೆಚ್ಚು ಶಬ್ಧ ಮಾಡುವ ಡಿಜೆಗಳ ಮಾಲೀಕರ ಮೇಲೆ ಕೇಸ್ ಹಾಕುತ್ತೇವೆ. ಇದಕ್ಕೂ ಮೊದಲು ನಮ್ಮ ಇಲಾಖೆಯ ಆ್ಯಪ್ ಮೂಲಕ ಸಿಬ್ಬಂದಿ ಪರಿಶೀಲಿಸುವರು. ಡಿಜೆ 10ಗಂಟೆಗೆ ಬಂದ್ ಮಾಡಿ, ಬೇಗ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಬೇಕು. ಪೊಲೀಸರಿಗೂ ಕುಟುಂಬವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ದುರ್ಗಮ್ಮ ಬೆಜವಾಡ, ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿದರು.
ಧಾರವಾಡ ರಾಮಕೃಷ್ಣ ಆಶ್ರಮದ ಮುಖ್ಯಸ್ಥ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮುಸ್ಲಿಂ ಧರ್ಮಗುರು ತಾಜುದ್ದೀನ ಖಾದ್ರಿ, ಕ್ರಿಶ್ಚಿಯನ್ ಧರ್ಮಗುರು ಫಾದರ್ ಸುನೀಲಕುಮಾರ, ಎಂಎಲ್‌ಸಿ ಪ್ರದೀಪ ಶೆಟ್ಟರ್, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಸತೀಶ ಮೆರವಾಡೆ, ವಿಠ್ಠಲ ಲದ್ವಾ, ಮಹೇಂದ್ರ ಸಿಂಘಿ, ಅಲ್ತಾಫ್ ಕಿತ್ತೂರ, ಗುರುನಾಥ ಉಳ್ಳಿಕಾಶಿ, ಇತರರು ಅಭಿಪ್ರಾಯ ಹಂಚಿಕೊಂಡರು.
ಉಪ ಮೇಯರ್ ರತ್ನಾಬಾಯಿ ನಾಜರೆ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಅಲ್ತಾಫ್ ಹಳ್ಳೂರ, ಗಂಗಾಧರ ದೊಡವಾಡ, ಶಾಂತರಾಜ ಪೋಳ, ಪ್ರೇಮನಾಥ ಚಿಕ್ಕತುಂಬಳ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ತಹಸೀಲ್ದಾರ್ ಮಹೇಶ ಗಸ್ತೆ, ಡಿಸಿಪಿಗಳಾದ ಶ್ರುತಿ ಎನ್.ಎಸ್., ಸಿ.ಆರ್. ರವೀಶ ಇತರರಿದ್ದರು.