ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಕಾಣಿಸಿದ್ದ ಚಿರತೆ. Leopard  
ಧಾರವಾಡ

Leopard ಚಿರತೆ ಕಾಣದಿದ್ದರೂ ಮುಂದುವರೆದ ಗಸ್ತು

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ಚಿರತೆ ತಿರುಗಾಡಿದ ಹೊಸ ಕುರುಹು ಕಂಡುಬಂದಿರಲಿಲ್ಲ.
  • ಚಿರತೆ ಕಾಣದಿದ್ದರೂ ಮತ್ತೆ ಮರಳುವ ಸಾಧ್ಯತೆಯೂ ಇದೆ.
  • ಐದು ದಿನಗಳಿಂದ ಚಿರತೆ ಕಾಣಿಸಿರಲಿಲ್ಲ.
ಗಾಮನಗಟ್ಟಿ ಹಾಗೂ ವಿಮಾನ ನಿಲ್ದಾಣದ ಅರಣ್ಯ ಪ್ರದೇಶದಲ್ಲಿ ಚಿರತೆಯ ಚಲನವಲನ ಕಂಡುಹಿಡಿಯಲು ಅಳವಡಿಸಿದ್ದ ಕ್ಯಾಮರಾ ಟ್ರಾ್ಯಪ್​ಗಳಲ್ಲಿ ಕಳೆದ ಐದು ದಿನಗಳಿಂದ ಚಿರತೆ ಕಾಣಿಸಿರಲಿಲ್ಲ.
ಹೀಗಾಗಿ, ಅರಣ್ಯ ಇಲಾಖೆ ಸಿಬ್ಬಂದಿ ಸೋಮಾರು ಸತತ ಆರು ತಾಸು ವಿಮಾನ ನಿಲ್ದಾಣ ಆವರಣದಲ್ಲಿನ ಸುಮಾರು 250 ಎಕರೆ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿದ್ದರು.
ಈ ಸಮಯದಲ್ಲಿ ಆರು ದಿನಗಳ ಹಿಂದಿನ ಚಿರತೆಯ ಲದ್ದಿ, ಅರ್ಧಂಬರ್ಧ ತಿಂದು ಬೀಸಾಡಿದ್ದ ವಿವಿಧ ಪ್ರಾಣಿಗಳ ಮಾಂಸದ ತುಂಡುಗಳು ಕಾಣಿಸಿದ್ದವು. ಆದರೆ, ಚಿರತೆ ತಿರುಗಾಡಿದ ಹೊಸ ಕುರುಹು ಕಂಡುಬಂದಿರಲಿಲ್ಲ.
ಗಾಮನಗಟ್ಟಿ ಹಾಗೂ ವಿಮಾನ ನಿಲ್ದಾಣದ ಆವರಣದಲ್ಲಿ ಮೂರು ಬೋನುಗಳನ್ನು ಇಡಲಾಗಿತ್ತು. ನಿಲ್ದಾಣದ ಆವರಣದಲ್ಲಿಟ್ಟಿದ್ದ ಬೋನಿನ ಬಳಿ ಬಂದಿದ್ದ ಚಿರತೆ, ಒಳಗೆ ಹೋಗದೇ ಮರಳಿ ಹೋಗಿತ್ತು.
ಇದೀಗ, ಚಿರತೆ ಕಾಣದಿದ್ದರೂ ಮತ್ತೆ ಮರಳುವ ಸಾಧ್ಯತೆಯೂ ಇದೆ. ಹೀಗಾಗಿ, ಇನ್ನೂ ಕೆಲ ದಿನಗಳವರೆಗೆ ಈ ಪ್ರದೇಶದಲ್ಲಿ ಗಸ್ತು ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.