Patriotism ನವಲಗುಂದ ಪಟ್ಟಣದ ವಿಶ್ವವಿಜೇತ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಡಾ. ಸಿದ್ದಲಿಂಗೇಶ ಹಂಡಗಿ ಮಾತನಾಡಿದರು.  
ಧಾರವಾಡ

Patriotism ಮಕ್ಕಳಲ್ಲಿ ರಾಷ್ಟ್ರ ಭಕ್ತಿ ಬೆಳೆಸಬೇಕಿದೆ

ನವಲಗುಂದ: ವಿದ್ಯಾರ್ಥಿ ಜೀವನ ಸ್ಪರ್ಧಾತ್ಮಕತೆಯಿಂದ ಕೂಡಿದ್ದು, ಹೊಸತನದ (Patriotism) ಶಿಕ್ಷಣದ ಜತೆಗೆ ಮೌಲ್ಯಯುತ ನೈತಿಕ ಶಿಕ್ಷಣ ನೀಡಿ ಅವರಲ್ಲಿ ರಾಷ್ಟ್ರ ಭಕ್ತಿ ಬೆಳೆಸಬೇಕಿದೆ ಎಂದು ಶಿಕ್ಷಕ, ಸಾಹಿತಿ ಡಾ. ಸಿದ್ಧಲಿಂಗೇಶ ಹಂಡಿಗಿ ಹೇಳಿದರು.
ಸ್ಥಳೀಯ ವಿಶ್ವವಿಜೇತ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಹಿರಿಯ ವ್ಯಾಪಾರಸ್ಥ ಸುಹಾಸ ಆನೇಗುಂದಿ ಮಾತನಾಡಿ, ಮಕ್ಕಳಲ್ಲಿ ದೇಶಪ್ರೇಮ ಬೆಳೆಸಿ, ಗುರು- ಹಿರಿಯರನ್ನು ಗೌರವಿಸುವ ಪರಂಪರೆ ಬೆಳೆಸುವಲ್ಲಿ ಈ ಶಾಲೆಯ ಕೊಡುಗೆ ಗಮನಾರ್ಹವಾಗಿದೆ ಎಂದರು.
ಕವಿವಿ ಸಿಂಡಿಕೇಟ್ ಮಾಜಿ ಸದಸ್ಯ ಜಯಪ್ರಕಾಶ ಬಾದಾಮಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾವಿನ್ಯಯುತ ಕೌಶಲಗಳ ಮೂಲಕ ಶಿಕ್ಷಣ ಕೊಡಬೇಕಾಗಿದೆ. ಆ ನಿಟ್ಟಿನಲ್ಲಿ ಸೇವಾ ಭಾರತಿ ವತಿಯಿಂದ ಇಲ್ಲಿ ಹಲವಾರು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.ಡಾ. ಬಿ.ಎಲ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಭಾರತೀಯ ಪರಂಪರೆಯ ಶಿಕ್ಷಣದ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸುವ ವಾತಾವರಣ ಶಾಲೆಯಲ್ಲಿದೆ ಎಂದರು.