ಹುಬ್ಬಳ್ಳಿಯ parivartana ವಿವೇಕಾನಂದ ಜನರಲ್ ಆಸ್ಪತ್ರೆಯಲ್ಲಿ ಭಾನುವಾರ ಎಸ್‌ಪಿ ಗುಂಜನ್ ಆರ್ಯ ಅವರು ‘ಪರಿವರ್ತನ’ ವ್ಯಸನ ಮತ್ತು ನಶಾ ಮುಕ್ತ ಕೇಂದ್ರವನ್ನು ಉದ್ಘಾಟಿಸಿದರು.
- ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಸಲಹೆ
ಹುಬ್ಬಳ್ಳಿ: ಪ್ರತಿಯೊಬ್ಬರೂ ವೃತ್ತಿಯನ್ನು parivartana ಪ್ರೀತಿಸಬೇಕು. ಇದರಿಂದ ಯಶಸ್ಸು ತಾನಾಗಿಯೇ ಒಲಿದು ಬರಲಿದೆ ಎಂದು ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಸಲಹೆ ನೀಡಿದರು.
ಇಲ್ಲಿಯ ದೇಶಪಾಂಡೆ ನಗರದ ವಿವೇಕಾನಂದ ಜನರಲ್ ಆಸ್ಪತ್ರೆಯಲ್ಲಿ ಭಾನುವಾರ ‘ಪರಿವರ್ತನ’ ವ್ಯಸನ ಮತ್ತು ನಶಾ ಮುಕ್ತ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನೋರೋಗ ತಜ್ಞರ ಮೇಲೆ ಸಾಮಾಜಿಕ ಜವಾಬ್ದಾರಿ ಇದೆ. ಸ್ವಚ್ಛ ಮನಸ್ಸು, ಸ್ವಚ್ಛ ಮನೆ, ಸ್ವಚ್ಛ ಸಮಾಜ ಹಾಗೂ ಸ್ವಚ್ಛ ರಾಷ್ಟ್ರ ನಿರ್ಮಾಣ ಮಾಡುವ ಗುರುತರವಿದೆ. ಜನರಲ್ಲಿ ಮಾಧ್ಯಮಗಳು ಜಾಗೃತಿ ಮೂಡಿಸುತ್ತಿವೆಯಾದರೂ ಜನರೂ ಜಾಗೃತಗೊಳ್ಳಬೇಕು ಎಂದರು.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ, ಪೊಲೀಸ್ ಇಲಾಖೆಯಿಂದ ‘ಡ್ರಗ್ಸ್ ವಿರುದ್ಧ ಯುದ್ಧ’ ಸಾರಿದ್ದೇವೆ. ಇದಕ್ಕೆ ಜನರೂ ಸಾಥ್ ನೀಡಬೇಕು. ಇದು ವಿಶ್ವದಾದ್ಯಂತ ಸಮಸ್ಯೆ ಇದೆ. ಡ್ರಗ್ಸ್ ಸೇವನೆಯಿಂದ ಹಾಳಾಗುತ್ತಿರುವ ಯುವ ಮನಸ್ಸುಗಳನ್ನು ಸಂರಕ್ಷಿಸಬೇಕಿದೆ. ಮನೋರೋಗ ತಜ್ಞರ ಸಲಹೆಗಳನ್ನೂ ಇಲಾಖೆ ಪಡೆಯುತ್ತಿದೆ ಎಂದರು.
ಪರಿವರ್ತನ ಕೇಂದ್ರದ ಮುಖ್ಯಸ್ಥ ಡಾ. ಸುಧೀಂದ್ರ ಹುದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮನೋರೋಗ ತಜ್ಞರು ಬರೀ ಮಾದಕ ವ್ಯಸನ, ನಶಾ ಮುಕ್ತಿಗೊಳಿಸಲಷ್ಟೇ ಅಲ್ಲ, ಶುದ್ಧ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆ ಇದೆ. ಹಾಗಾಗಿಯೇ ವೈಜ್ಞಾನಿಕ ಅಧ್ಯಯನದಿಂದ ದೃಢಪಟ್ಟ ಚಿಕಿತ್ಸೆಯಿಂದಲೂ ಸ್ವಚ್ಛ ಸಮಾಜ ನಿರ್ಮಿಸಲಾಗುತ್ತಿದೆ ಎಂದರು.
ವಿವೇಕಾನಂದ ಜನರಲ್ ಆಸ್ಪತ್ರೆಯ ಚೇರ್ಮನ್ ಕಮಲನಯನ ಮೆಹ್ತಾ, ಪ್ರಾಧ್ಯಾಪಕ ಡಾ.ಎಸ್.ಜಿ. ಧಡೂತಿ, ಶಿಕ್ಷಕಿ ಸುಮಾ ಹುದ್ದಾರ, ಮಕ್ಕಳ ತಜ್ಞೆ ಡಾ. ಅನುಷಾ ಹುದ್ದಾರ, ಪ್ರಮುಖರಾದ ಕೇಶವ ದೇಸಾಯಿ, ಅನುಪಮಾ ಪಾಂಡುರಂಗಿ, ಅಮೃತಲಾಲ್ ಜೈನ್, ನಿತಿನ್ ಠಕ್ಕರ, ಸತೋಶ ಗಾಮಿ, ಬಿ.ವಿ. ಪಾಟೀಲ, ಆಸ್ಪತ್ರೆಯ ಸಿಇಒ ರಾಹುಲ್ ಮುಂಗೇಕರ್, ಆಡಳಿತಾಧಿಕಾರಿ ಡಾ. ಮಂಜುಳಾ ಹುಗ್ಗಿ ಇತರರಿದ್ದರು.