ದೆಹಲಿಯಲ್ಲಿ (Para Shooting) ಆಯೋಜಿಸಿದ್ದ 6ನೇ ರಾಷ್ಟ್ರೀಯ ಪ್ಯಾರಾ ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದ ರಾಕೇಶ ನಿಡಗುಂದಿ ಹಾಗೂ ಜ್ಯೋತಿ ಸಣ್ಣಕ್ಕಿ ದಂಪತಿ. 
ಧಾರವಾಡ

ಪ್ಯಾರಾ ಶೂಟಿಂಗ್​ನಲ್ಲಿ (Para Shooting) ರಾಕೇಶ್​-ಜ್ಯೋತಿಗೆ ಚಿನ್ನ

ಹುಬ್ಬಳ್ಳಿ:ದೆಹಲಿಯಲ್ಲಿ (Para Shooting) ಆಯೋಜಿಸಿದ್ದ 6ನೇ ರಾಷ್ಟ್ರೀಯ ಪ್ಯಾರಾ ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ರಾಕೇಶ ನಿಡಗುಂದಿ ಹಾಗೂ ಜ್ಯೋತಿ ಸಣ್ಣಕ್ಕಿ ದಂಪತಿ ಚಿನ್ನದ ಪದಕ ಗೆದ್ದು ಗಮನ ಸೆಳೆದಿದ್ದಾರೆ. ಈ ಚಾಂಪಿಯನ್​ಶಿಪ್​ನಲ್ಲಿ ಕರ್ನಾಟಕದವರು 4 ಚಿನ್ನ, 1 ಕಂಚಿನ ಪದಕ ಜಯಿಸಿದರು.
ನವೆಂಬರ್ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕೇಶ-ಜ್ಯೋತಿ ಜೋಡಿ 10 ಮೀಟರ್ ಏರ್ ರೈಫಲ್ ಸ್ಟ್ಯಾಡಿಂಗ್ ಎಸ್​ಎಚ್-1ಮಿಶ್ರ ವಿಭಾಗದಲ್ಲಿ ಮಹಾರಾಷ್ಟ್ರದ ದಂಪತಿಗಳಾದ ಸ್ವರೂಪ ಉನಹಲ್ಕಾರ್ ಮತ್ತು ರೋಮಿ ಉನಹಲ್ಕಾರ್ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಇದಲ್ಲದೇ ರಾಕೇಶ ನಿಡಗುಂದಿ 10 ಮೀಟರ್ ಏರ್ ರೈಫಲ್ ಸ್ಟ್ಯಾಡಿಂಗ್ ಎಸ್​ಎಚ್ 1ವೈಯಕ್ತಿಕ ವಿಭಾಗದಲ್ಲಿ ಚಿನ್ನ ದ ಪದಕ ಗಳಿಸಿದ್ದಾರೆ. ಜ್ಯೋತಿ ಸಣ್ಣಕ್ಕಿ 50ಮೀಟರ್ 3 ಪೋಜಿಷನ್ ರೈಫಲ್ ಎಸ್​ಎಚ್1 ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಶ್ರೀಹರ್ಷ ದೇವರಡ್ಡಿ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್​ಎಚ್ 2 ವಿಭಾಗದಲ್ಲಿ ಹಾಗೂ ಬ್ಲೈಂಡ್ ಶೂಟರ್ ಆದ ವೈಷ್ಣವಿ ರವಿಶಂಕರ ವಿ1-ಎಸ್ 10 ಮೀಟರ್ ರೈಫಲ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು.
ರಾಕೇಶ ಮತ್ತು ಜ್ಯೋತಿ ಸಣ್ಣಕ್ಕಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯಲ್ಲಿ ಮಾಜಿ ಸೈನಿಕ ರವಿಚಂದ್ರ ಬಾಳೆಹೊಸೂರ ಅವರಲ್ಲಿ ತರಬೇತಿ ಪಡೆದಿದ್ದಾರೆ. ರಾಕೇಶ ನಿಡಗುಂದಿ ಎರಡು ವರ್ಷದಿಂದ ದೆಹಲಿಯ ಸಾಯಿ ಎಕ್ಸಲೆಂಟ್ ಸೆಂಟರ್​ನಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ.