panjina meravanige ಬಿಜೆಪಿ ಹು-ಧಾ ಮಹಾನಗರ ಜಿಲ್ಲಾ ಎಸ್.ಟಿ. ಮೋರ್ಚಾ ವತಿಯಿಂದ ನಗರದಲ್ಲಿ ಶನಿವಾರ ಪಂಜಿನ ಮೆರವಣಿಗೆ ಮಾಡಲಾಯಿತು.
ಹುಬ್ಬಳ್ಳಿ: ಸ್ವಾತಂತ್ರೊೃೀತ್ಸವ ಹಾಗೂ ಹರ್ ಘರ್ ತಿರಂಗಾ ಅಭಿಯಾನ
ನಿಮಿತ್ತ ಬಿಜೆಪಿ ಹು-ಧಾ ಮಹಾನಗರ ಜಿಲ್ಲಾ ಎಸ್.ಟಿ. ಮೋರ್ಚಾ ವತಿಯಿಂದ ನಗರದಲ್ಲಿ ಶನಿವಾರ ಪಂಜಿನ ಮೆರವಣಿಗೆ ಮಾಡಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಮಹಾಸಂಕಲ್ಪವಿದು. ದೇಶಪ್ರೇಮ ಹಾಗೂ ದೇಶ ಕಟ್ಟುವ ಉದ್ದೇಶವಿಟ್ಟುಕೊಂಡು ಅಭಿಯಾನ ಶುರು ಮಾಡಿದರು. ಪರಿಣಾಮವಾಗಿ ಸ್ವಾತಂತ್ರೊೃೀತ್ಸವ ಹಬ್ಬದ ರೀತಿಯ ವಾತಾವರಣ ನಿರ್ಮಾಣವಾದಂತಾಗಿದೆ ಎಂದು ಬಣ್ಣಿಸಿದರು.
ರಾಷ್ಟ್ರಭಕ್ತಿಯ ಘೋಷಣೆಗಳೊಂದಿಗೆ ಕೇಶ್ವಾಪುರ ವೃತ್ತದಿಂದ ಪ್ರಾರಂಭಗೊಂಡ ಪಂಜಿನ ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಾಗಶೆಟ್ಟಿಕೊಪ್ಪದ ಆಂಜನೇಯ ದೇವಸ್ಥಾನದ ಆವರಣದಲ್ಲಿ ದೇಶಸೇವೆಗೈದ ನಿವೃತ್ತ ಸೈನಿಕರನ್ನು ಸತ್ಕರಿಸುವ ಮೂಲಕ ಸಂಪನ್ನಗೊಂಡಿತು.
ಮೋರ್ಚಾ ಅಧ್ಯಕ್ಷ ಅಶೋಕ ವಾಲ್ಮೀಕಿ, ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಪ್ರಮುಖರಾದ ಮಣಿಕಂಠ ಶ್ಯಾಗೋಟಿ, ಶಿವು ಮೆಣಸಿನಕಾಯಿ, ವಸಂತ ನಾಡಜೋಶಿ, ಮಂಜುನಾಥ ಕಾಟಕರ, ಮಾರುತಿ ಚಾಕಲಬ್ಬಿ, ಹನುಮಂತ ಗೌಡ್ರ, ಅಶೋಕ ಬೀಳಗಿ, ವೀಣಾ ಬೀಳಗಿ ಇತರರಿದ್ದರು.