painting workshop ಹುಬ್ಬಳ್ಳಿಯ ನವನಗರ ರಮಿಲಾ ಪ್ರಶಾಂತಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಭಾವಲಹರಿ ಚಿತ್ರಕಲಾ ಶಿಬಿರದಲ್ಲಿ ಪಾಲ್ಗೊಂಡ ಕಲಾವಿದರು. ನಂದಿನಿ ಮಜೇಥಿಯಾ, ಆರ್.ಎಫ್. ಹಿರೇಗೌಡರ, ಡಾ. ಸುನಿಲಕುಮಾರ, ಅಮರೇಶ ಹಿಪ್ಪರಗಿ, ಡಾ. ವಿ.ಬಿ. ನಿಟಾಲಿ, ಇತರರು ಇದ್ದರು.
- ಭಾವಲಹರಿ ಚಿತ್ರಕಲಾ ಶಿಬಿರ ಉದ್ಘಾಟನೆ
- ಫೌಂಡೇಷನ್ ಅಧ್ಯಕ್ಷೆ ನಂದಿನಿ ಮಜೇಥಿಯಾ ಅನಿಸಿಕೆ
ಹುಬ್ಬಳ್ಳಿ: painting workshop ಮಜೇಥಿಯಾ ಫೌಂಡೇಷನ್ ಹಾಗೂ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯಗಳ ಸಹಯೋಗದಲ್ಲಿ ನವನಗರದ ಕ್ಯಾನ್ಸರ್ ಆಸ್ಪತ್ರೆ ಆವರಣದ ರಮಿಲಾ ಪ್ರಶಾಂತಿ ಮಂದಿರದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಭಾವಲಹರಿ ಚಿತ್ರಕಲಾ ಶಿಬಿರಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಫೌಂಡೇಷನ್ ಅಧ್ಯಕ್ಷೆ ನಂದಿನಿ ಮಜೇಥಿಯಾ ಶಿಬಿರಕ್ಕೆ ಚಾಲನೆ ನೀಡಿದರು. ಪ್ರತಿಯೊಬ್ಬರಲ್ಲೂ ಒಂದು ಕಲೆ ಇರುತ್ತದೆ. ಅದನ್ನು ಅಭಿವ್ಯಕ್ತಿ ಪಡಿಸಲು ಉತ್ತಮ ವೇದಿಕೆ ಬೇಕಾಗುತ್ತದೆ. ಅಂತಹ ಕಲಾವಿದರಿಗೆ ಇದು ವೇದಿಕೆಯಾಗಿದೆ ಎಂದರು.
ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ನಾಡು ನುಡಿ ಕಲೆ ಸಂಸತಿಯ ಪ್ರತಿಬಿಂಬ ಚಿತ್ರಕಲೆ. ಕಲಾವಿದರು ಚಿತ್ರಗಳ ಮೂಲಕ ಅದನ್ನು ಕಟ್ಟಿಕೊಡುತ್ತಾರೆ ಎಂದರು.
ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಆರ್.ಎಫ್. ಹಿರೇಗೌಡರ ಮಾತನಾಡಿ, ಮನುಷ್ಯನಲ್ಲಿ ಎಲ್ಲ ವಿಚಾರಗಳು ವಿಕಾರಗಳು ಏಕಕಾಲಕ್ಕೆ ಬರುತ್ತಿರುತ್ತವೆ. ಅವನ್ನು ಸರಿಯಾಗಿಸಲು ಇಂಥ ವರ್ಣ ಚಿತ್ರಕಲಾ ಶಿಬಿರಗಳು ಅಗತ್ಯವಾಗಿವೆ ಎಂದರು.