RTI logo 
ಧಾರವಾಡ

ಪೋರ್ಟಲ್ ಜಾಗೃತಿಗೆ ಎಳ್ಳು ನೀರು!

ಜಗದೀಶ ಹೊಂಬಳಿ
ಪೋರ್ಟಲ್ ಜಾಗೃತಿಗೆ ಎಳ್ಳು ನೀರು!
ಧಾರವಾಡ: ಮಾಹಿತಿ ಹಕ್ಕು ಕಾಯ್ದೆಯಡಿ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆಯಲು ಸಾರ್ವಜನಿಕರು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಧಾರವಾಡ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಪಾಲನೆಯಾಗುತ್ತಿಲ್ಲ.
2018ರ ಮಾರ್ಚ್‌ನಲ್ಲಿ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ಅವರು ಮಾಹಿತಿ ಹಕ್ಕು ಕೋರಿಕೆ ಅರ್ಜಿ, ಪ್ರಥಮ ಮೇಲ್ಮನವಿ ಅರ್ಜಿ ಸ್ವೀಕರಿಸಲು, ಇತ್ಯರ್ಥ ಪಡಿಸಲು ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಮಾಹಿತಿ ಹಕ್ಕು ಆನ್‌ಲೈನ್ ವ್ಯವಸ್ಥೆ ಆರಂಭಕ್ಕೆ ಆದೇಶಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಆನ್‌ಲೈನ್ ಪೋರ್ಟಲ್ ಬಗ್ಗೆ ಅಧಿಕಾರಿಗಳು
ಸಾರ್ವಜನಿಕರಿಗೆ ಸರಿಯಾಗಿ ಅರಿವು ಮೂಡಿಸಿಲ್ಲ. ಬಹುತೇಕ ಇಲಾಖೆಗಳ ಕಚೇರಿಯಲ್ಲಿ ಆನ್‌ಲೈನ್ ಪೋರ್ಟಲ್‌ನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯುವ ಅವಕಾಶ ಸಾರ್ವಜನಿಕರಿಗೆ ಲಭ್ಯವಿದೆ ಎಂಬ ವಿಷಯವನ್ನು ಪ್ರಚುರ ಪಡಿಸುವ ಫಲಕವೂ ಪ್ರಕಟಿಸಿಲ್ಲ.
ಆನ್‌ಲೈನ್ ಪೋರ್ಟಲ್: ಜಿಲ್ಲಾ ಮಟ್ಟದಲ್ಲಿ ಆರ್‌ಟಿಐ ಆನ್‌ಲೈನ್ ವ್ಯವಸ್ಥೆ ಜಾರಿಗೆ ಅಪರ ಜಿಲ್ಲಾಧಿಕಾರಿಯನ್ನು ಸಮನ್ವಯಾಧಿಕಾರಿಯನ್ನಾಗಿ
ಸರ್ಕಾರ ನೇಮಿಸಿ, ಅನುಷ್ಠಾನಗೊಳಿಸುವ ಅಧಿಕಾರ ನೀಡಿದೆ. ಜಿಲ್ಲೆ, ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಪ್ರತಿಯೊಂದು ಇಲಾಖೆಗೂ ಈಗಾಗಲೇ ಲಭ್ಯ ಇರುವ ತಾಂತ್ರಿಕ ಸಮಾಲೋಚಕರನ್ನು నియో:జినటి శు. ಆನ್‌ಲೈನ್ ಪೋರ್ಟಲ್ ವ್ಯವಸ್ಥೆ ಕುರಿತಂತೆ ಅಧಿಕಾರಿಗಳಿಗೆ ತರಬೇತಿ ನೀಡುವುದು ಕಡ್ಡಾಯವಾಗಿದೆ. ಮಾಹಿತಿ ಸ್ವೀಕರಿಸಿದ ಅರ್ಜಿಗಳ ವಿಲೇವಾರಿ ಕುರಿತಂತೆ ನಿಗದಿತ ಅವಧಿಯೊಳಗೆ ಇತರೆ ಇಲಾಖೆಗಳೊಂದಿಗೆ ಸಂಪರ್ಕಿಸಿ ಕ್ರಮ ವಹಿಸಬೇಕು.
ಪರಿಣಾಮಕಾರಿಯಾಗಿ ಪಾಲಿಸುತ್ತಿಲ್ಲ:
ಆನ್‌ಲೈನ್‌ ಪೋರ್ಟಲ್‌ನಲ್ಲಿ ಸಾರ್ವಜನಿಕ ಪ್ರಾಧಿಕಾರ, ಮೇಲ್ಮನವಿ ಪ್ರಾಧಿಕಾರ, ಸಾರ್ವಜನಿಕ ಮಾಹಿತಿ ಅಧಿಕಾರಿಯ ಪೂರ್ಣ ಮಾಹಿತಿ ಪ್ರಕಟಿಸಿ ಕಾಲ ಕಾಲಕ್ಕೆ ಕ್ರಮಬದ್ಧವಾಗಿಸಬೇಕು. ಆನ್‌ಲೈನ್ ಪೋರ್ಟಲ್‌ ನಲ್ಲಿ ಸಲ್ಲಿಕೆಯಾಗುವ ಅರ್ಜಿಯನ್ನು 2 ದಿನದೊಳಗೆ ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ರವಾನಿಸಬೇಕು ಎಂದು 2019ರ ಡಿಸೆಂಬರ್ 12ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಜತೆಗೆ ಮಾಹಿತಿ ಹಕ್ಕು ಕಾಯ್ದೆ ಪರಿಣಾಮಕಾರಿ ಜಾರಿಗೆ 2018ಮಾರ್ಚ್‌ನಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಮಾಹಿತಿ ಹಕ್ಕು ಆನ್‌ಲೈನ್ ವ್ಯವಸ್ಥೆ ಆರಂಭಕ್ಕೆ ಆದೇಶಿಸಲಾಗಿದೆ.
ಆಫ್‌ಲೈನಲ್ಲೇ ಹೆಚ್ಚು
ಧಾರವಾಡ ಜಿಲ್ಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಅಕ್ಟೋಬರ್ ಒಂದೇ ತಿಂಗಳಲ್ಲಿ ಆಫ್‌ಲೈನ್ ನಲ್ಲಿ 72 ಅರ್ಜಿ, ನವೆಂಬರ್ ತಿಂಗಳಲ್ಲಿ 47 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಆನ್‌ಲೈನ್‌ನಲ್ಲಿ ಅಕ್ಟೋಬರ್‌ನಲ್ಲಿ ಕೇವಲ 06 ಅರ್ಜಿ, ಸೆಪ್ಟೆಂಬರ್‌ನಲ್ಲಿ 08 ಅರ್ಜಿಗಳು ಬಂದಿವೆ. 2023ರ ಏಪ್ರಿಲ್‌ನಿಂದ 2024ರ ಮಾರ್ಚ್ 31ರವರೆಗೆ ಆನ್‌ಲೈನ್‌ನಲ್ಲಿ 88 ಹಾಗೂ 2024ರ ಏಪ್ರಿಲ್ ನಿಂದ 2025ರ ಮಾರ್ಚ್ 31ರವರೆಗೆ 115 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ.
"

ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯಲು ಸಾರ್ವಜನಿಕರಿಗಾಗಿ ಆನ್‌ಲೈನ್ ಪೋರ್ಟಲ್ ವ್ಯವಸ್ಥೆ ಜಾರಿಗೊಳಿಸಿದ್ದೇವೆ. ಈ ಬಗ್ಗೆ ಕಾರ್ಯಾಗಾರ ನಡೆಸುವ ವೇಳೆ ಜಾಗೃತಿ ಮೂಡಿಸುತ್ತಿದ್ದೇವೆ.

"

ಆರ್‌ಟಿಐ ಅರ್ಜಿ ಸಲ್ಲಿಕೆಗೆ ಆನ್‌ಲೈನ್ ಪೋರ್ಟಲ್ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆನ್ನುವ ಆದೇಶವಿದ್ದರೂ ಅಧಿಕಾರಿಗಳು ನಿಷ್ಕಾಳಜಿ ವಹಿಸಿದ್ದಾರೆ. ಒಂದೆರಡು ಇಲಾಖೆ ಹೊರತು ಪಡಿಸಿದರೆ ಬೇರೆ ಇಲಾಖೆಗಳಲ್ಲಿ ಅನುಷ್ಠಾನವಾಗಿಲ್ಲ.