nwksrtc protestಬಾಕಿ ಉಳಿದ 814 ಚಾಲಕ-ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ನೊಂದ ಅಭ್ಯರ್ಥಿಗಳು ಹುಬ್ಬಳ್ಳಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. 
ಧಾರವಾಡ

nwksrtc protest ಮುಂದವರಿದ ನೊಂದ ಅಭ್ಯರ್ಥಿಗಳ ಹೋರಾಟ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ nwksrtc protest ಬಾಕಿ ಉಳಿದ 814 ಚಾಲಕ-ನಿರ್ವಾಹಕ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ಆಗ್ರಹಿಸಿ ನೊಂದ ಅಭ್ಯರ್ಥಿಗಳು ಇಲ್ಲಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ನಡೆಸುತ್ತಿರುವ ಹೋರಾಟವು ಬುಧವಾರ ಮುಂದುವರಿಯಿತು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2,814 ಚಾಲಕ/ ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು 2019ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಮೊದಲ ಹಂತದಲ್ಲಿ ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿತ್ತು. ಹೋರಾಟದ ನಂತರ ಮತ್ತೆ ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಯಿತು. ಈಗ ಬಾಕಿ ಉಳಿದಿರುವ 814 ಹುದ್ದೆಗಳನ್ನೂ ಶೀಘ್ರವೇ ಭರ್ತಿ ಮಾಡುವಂತೆ ಒತ್ತಾಯಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಸುಭಾಷಸಿಂಗ್ ಜಮಾದಾರ ನೇತೃತ್ವ ವಹಿಸಿದ್ದರು.
ವಿಶ್ವ ಹಿಂದೂ ಪರಿಷತ್‌ನ ರಮೇಶ ಕದಂ, ಚೇತನರಾವ್, ಯಲ್ಲಪ್ಪ ಬಾಗಲಕೋಟೆ, ದೂದಾಬಾಯಿ ಚೌಧರಿ, ಮಾಲಾರಾಮ್ ದೇವಾಸಿ, ಕಿಶೋರ ಪಟೇಲ್, ಬಾಬುಲಾಲ್ ಶಿರವಿ, ರಾಜು ಸೂರ್ಯವಂಶಿ, ಗಂಗಾಧರ ಗುಜಮಾಗಡಿ, ಪ್ರಮುಖರಾದ ಡಾ. ರಘು ಅಕಮಂಚಿ, ರವೀಂದ್ರ ದಂಡಿನ, ಪ್ರೊ. ಸಂದೀಪ ಬೂದಿಹಾಳ, ತೋಟಪ್ಪ ನಿಡಗುಂದಿ, ಅಭಿಷೇಕ ಮೆಹ್ತಾ, ಪ್ರಶಾಂತ ಆಡೂರ, ಮಾಲತೇಶ ಕುಲಕರ್ಣಿ, ಕೃಷ್ಣ ಬಿದ್ರಳ್ಳಿ, ಶಾಶ್ವತ ಪೂಜಾರ ಇತರರು ಸಾಥ್ ನೀಡಿದರು.