nss students ಹುಬ್ಬಳ್ಳಿಯ ಉಣಕಲ್ಲ ಐ.ಜಿ. ಹಿರೇಗೌಡರ ಕಾಲೇಜಿನಲ್ಲಿ ಜೈನ್ ಇಂಜಿನಿಯರಿಂಗ್ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಕೈಗೊಂಡ ಸ್ವಚ್ಛತಾ ಕಾರ್ಯಕ್ರಮ. ಡಾ. ಪ್ರಶಾಂತ ಬಣಕಾರ, ಶಿವಾನಂದ ಹೆಬಸೂರ, ಶಿವಣ್ಣ ಹಂಗರಕಿ, ಇತರರು ಇದ್ದರು.
ಹುಬ್ಬಳ್ಳಿ: nss students ಇಲ್ಲಿಯ ಉಣಕಲ್ಲ ಐ.ಜಿ. ಹಿರೇಗೌಡರ ಕಾಲೇಜು ಹಾಗೂ ಕೊಕಾಟಿ ಪ್ರೌಢಶಾಲೆಯ ಪುನರುಜ್ಜೀವನ ಕಾರ್ಯವನ್ನು ನಗರದ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿ ಸಂಸ್ಥೆಯ ಎನ್ಎಸ್ಎಸ್ ವಿದ್ಯಾರ್ಥಿಗಳು ಯಶಸ್ವಿಯಾಗಿ ಕೈಗೊಂಡರು.
ಬಿಎನ್ಎಸ್ಕೆ 659 ಚಟುವಟಿಕೆಯಡಿ "ಯುವಶಕ್ತಿ ಕಾರ್ಯ' ಘೋಷಣೆಯೊಂದಿಗೆ ಶಾಲೆಯ ಪರಿಸರದಲ್ಲಿ ಬಣ್ಣ ಹಚ್ಚುವಿಕೆ, ಸ್ವಚ್ಛತೆ ಹಾಗೂ ನಿರ್ವಹಣಾ ಕಾರ್ಯಗಳನ್ನು ನೆರವೇರಿಸಿದರು. ವಿದ್ಯಾರ್ಥಿಗಳೇ ಬದಲಾವಣೆಯ ಶಕ್ತಿ ಎಂಬ ಸಂದೇಶ ಸಾರಿದರು.
ಜೈನ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಬಣಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರೇಗೌಡರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬಸೂರ, ಶಿವಣ್ಣ ಹಂಗರಕಿ, ಕೊಕಾಟೆ ಶಾಲೆ ಪ್ರಾಚಾರ್ಯ ಶಿವಕುಮಾರ, ಸಿಬ್ಬಂದಿ ಉಪಸ್ಥಿತರಿದ್ದರು.