ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮದಲ್ಲಿ ಮೊಹರಂ ಆಚರಿಸಲಾಯಿತು.
ಅಣ್ಣಿಗೇರಿ: ತಾಲೂಕಿನ ನಲವಡಿ ಗ್ರಾಮದಲ್ಲಿ ಮೊಹರಂ ಆಚರಿಸಲಾಯಿತು. ಹಿಂದೂ ಯುವಕರು ಎರಡು ಹೆಜ್ಜೆ ಮೇಳವನ್ನು ಸಂಘಟಿಸಿದ್ದರು. ಪಂಜಾಗಳನ್ನು ಎಲ್ಲ ಓಣಿಗಳಲ್ಲಿ ಕರೆದುಕೊಂಡು ಹೋಗಿ ದರ್ಶನ ಮಾಡಿಸಿದರು.
ಗ್ರಾಮಸ್ಥ ಪ್ರದೀಪ ಲೆಂಕಿನಗೌಡರ ಮಾತನಾಡಿ, ಯಾವುದೇ ಆಚರಣೆಗಳು ಭಕ್ತಿ, ಶ್ರದ್ಧೆ, ತ್ಯಾಗ, ಬಲಿದಾನಗಳ ಹಿನ್ನೆಲೆ ಹೊಂದಿರುತ್ತವೆ. ಅವು ಆ ಧರ್ಮಕ್ಕೆ ಸೀಮಿತವಾಗಿರದೆ ಲೋಕಕ್ಕೆ ಶಾಂತಿಯ ಸಂದೇಶ ಸಾರುತ್ತವೆ. ವಿಶ್ವದಲ್ಲಿನ ಯಾವುದೇ ಧರ್ಮವು ಕೆಟ್ಟದ್ದನ್ನು ಬೋಧಿಸುವುದಿಲ್ಲ. ಆದರೆ, ನಾವು ನಮ್ಮ ಸ್ವಾರ್ಥಕ್ಕಾಗಿ ಅವುಗಳನ್ನು ಸೀಮಿತಗೊಳಿಸುತ್ತಿದ್ದೇವೆ ಎಂದರು.
ಶರೀಫ ಸುಂಕದ, ಮೊಲಾಸಾಬ ದಾವಲಕಾನವರ, ಪೀರ ಸಾಬ ದೊಡಮನಿ, ಮಹಮ್ಮದ ಬುಳ್ಳನ್ನವರ, ರಫೀಕ್ ಕಣವಿ ಶಿಲಾರಸಬ್ ಸುಂಕದ, ಆಂಜನೇಯ ಭಜನಾ ಮಂಡಳಿ, ಬಸವೇಶ್ವರ ಭಜನಾ ಮಂಡಳಿ, ರೇಣುಕಾದೇವಿ ಭಜನಾ ಮಂಡಳಿ, ಗ್ರಾಮ ದೇವತೆ ಭಜನಾ ಮಂಡಳಿ, ಆದಿ ಜಾಂಬವ ಭಜನಾ ಮಂಡಳಿ, ವಾಲ್ಮೀಕಿ ಭಜನಾ ಮಂಡಳಿ ಹಾಗೂ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.