no mobile ಆರ್ವಿಎಸ್ ಶಾಲೆ ನಿರ್ಧಾರ
- ನವಲಗುಂದ ಆರ್ವಿಎಸ್ ಶಾಲೆ ನಿರ್ಧಾರ
- ಏಕಾಗ್ರತೆ ಹಾಗೂ ಆರೋಗ್ಯಕರ ಕಲಿಕೆಗೆ ಅವಕಾಶ
ಹುಬ್ಬಳ್ಳಿ: no mobile ಮೊಬೈಲ್ ಮೇಲಿನ ಅವಲಂಬನೆ ತಪ್ಪಿಸಿ ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಆರೋಗ್ಯಕರ ಕಲಿಕೆಗೆ ಅವಕಾಶ ನೀಡುವ ಸಲುವಾಗಿ ನವಲಗುಂದದ ಖನ್ನೂರ ಬಳಿ ಇರುವ ಆರ್ವಿಎಸ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿನೂತನ ಯೋಜನೆ ರೂಪಿಸಿದೆ.
ಮೊಬೈಲ್ ಮುಕ್ತ ಶಾಲೆ ಘೋಷಣೆ ಮಾಡಿ ಅದರಂತೆ ಮುಂಬರುವ ಶೈಕ್ಷಣಿಕ ಸಾಲಿನಿಂದ ಮೊಬೈಲ್ ಆಪ್ಗಳನ್ನು ದೂರ ಇಟ್ಟು ವಿದ್ಯಾರ್ಥಿ ಕೇಂದ್ರಿತ ಕಲಿಕೆಗೆ ಒತ್ತು ನೀಡಲು ನಿರ್ಧರಿಸಲಾಗಿದೆ.
ಆರ್ವಿಎಸ್ನಲ್ಲಿ ವಿದ್ಯಾರ್ಥಿಗಳ ಹಿತವೇ ಮೊದಲ ಆದ್ಯತೆಯಾಗಿದ್ದು, ಕಲಿಕೆಗೆ ಮೊಬೈಲ್ ಅಪ್ಲಿಕೇಶನ್ಗಳನ್ನು ಪ್ರೋತ್ಸಾಹಿಸದಿರಲು ಮುಂದಾಗಿದೆ.
ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವುದು, ಪರದೆಯಿಂದಾಗುವ ವ್ಯತ್ಯಯ ಕಡಿಮೆ ಮಾಡುವುದು, ತರಗತಿ ಸಂವಹನ ಬಲಪಡಿಸುವುದು, ಆರೋಗ್ಯಕರ ಅಭ್ಯಾಸಗಳಿಗೆ ಒತ್ತು ನೀಡುವುದು, ಪೋಷಕರೊಂದಿಗೆ ನೇರ ಸಂಪರ್ಕ ಸಾಧಿಸುವುದು ಈ ಯೋಜನೆಯ ಪ್ರಮುಖ ಅಂಶಗಳಾಗಿವೆ.
ನಾವು ಪರದೆಯ ಮೇಲೆ ಅಲ್ಲ, ವ್ಯಕ್ತಿತ್ವ ಮತ್ತು ಏಕಾಗ್ರತೆಯ ಮೇಲೆ ನಂಬಿಕೆ ಇಟ್ಟಿದ್ದೇವೆ. ಬುದ್ಧಿ ಸ್ಪರ್ಧೆಗಳಲ್ಲಿ ಗೆಲ್ಲಿಸಿದರೆ ಜೀವನ ಕೌಶಲಗಳು ವಿದ್ಯಾರ್ಥಿಗಳನ್ನು ಬದುಕಿನಲ್ಲಿ ಗೆಲ್ಲಿಸುತ್ತವೆ ಎಂದು ಆರ್ವಿಎಸ್ ಶಾಲೆ ಚೇರ್ಮನ್ ಸುರೇಶ ಅಂಗಡಿ ಅಭಿಪ್ರಾಯಪಡುತ್ತಾರೆ.