ಧಾರವಾಡ ಜಿಪಂ‌ ಸಭಾಭವನದಲ್ಲಿ ಸಿಇಒ ಭುವನೇಶ ಪಾಟೀಲ ಎಸ್ ಎಸ್ ಎಲ್ ಸಿ ಫಲಿತಾಂಶ ವಿಷ್ಲೇಷಣಾ ಸಭೆ 
ಧಾರವಾಡ

ಯಾವುದೇ ಸರ್ಕಾರಿ ಶಾಲೆಗಳ ವಿಲೀನವಿಲ್ಲ

ಧಾರವಾಡ: ಕಡಿಮೆ ಫಲಿತಾಂಶದ ಶಾಲೆಗಳಿಗೆ ಪಾಲಕರು ತಮ್ಮ ಮಕ್ಕಳನ್ನು ದಾಖಲಿಸಲು ಇಚ್ಚಿಸುವುದಿಲ್ಲ. ಅಂತಹ ಶಾಲೆಗಳನ್ನು ನಡೆಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ಪಾಲಕರಿಗೆ ಸಮೀಪದ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳ ದಾಖಲಿಸುವಂತೆ ಮನವಲಿಸಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.
ಜಿಪಂ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಽಕಾರಿಗಳ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆ ಜರುಗಿಸಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ವಿಶ್ಲೇಷಣೆ ಮಾಡಿ ಮಾತನಾಡಿದರು. ನಿರಂತರವಾಗಿ ಪಾಲಕರ ಸಭೆ ಜರುಗಿಸಬೇಕು. ಕಡಿಮೆ ಫಲಿತಾಂಶ ಮಾಡುವ ಖಾಸಗಿ ಹಾಗೂ ಇತರ ಶಾಲೆಗಳ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ, ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು. ಯಾವುದೇ ಸರ್ಕಾರಿ ಶಾಲೆಗಳ ವಿಲೀನದ ಪ್ರಕ್ರಿಯೆ ಇಲ್ಲ ಎಂದು ಹೇಳಿದರು.
ಮುಂಬರುವ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಅವರು, ಸತತ ಮೂರು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 0 ದಿಂದ ಶೇ. 40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಹಾಗೂ ಶೇ. 25ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಹೊಂದಿದ ಖಾಸಗಿ ಶಾಲೆಗಳ ಫಲಿತಾಂಶ ವಿಶ್ಲೇಷಿಸಿದರು.
ಈ ಬಾರಿಯ ಸರ್ಕಾರಿ ಶಾಲೆಗಳ ಫಲಿತಾಂಶವು ಉತ್ತಮವಾಗಿದೆ. ಆದ್ದರಿಂದ ಮಕ್ಕಳ ದಾಖಲಾತಿ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಪಾಲಕರಿಗೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಶಿಕ್ಷಣ ಇಲಾಖೆಯ ಎಲ್ಲ ಹಂತದ ಅಽಕಾರಿಗಳು ಪ್ರಯತ್ನಿಸಬೇಕು ಎಂದು ಸೂಚಿಸಿದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕ್ರಿಯಾ ಯೋಜನೆ ಮೂಲಕ ಕಲಿಕಾ ಪ್ರಗತಿ ಸಾಽಸುವಂತೆ ಮಾಡುವುದು ಪ್ರಸಕ್ತ ವರ್ಷದ ಮುಖ್ಯ ಅಂಶವಾಗಿರಲಿ. ಎಲ್ಲ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಉತ್ತಮ ಗುರಿ ಸಾಧಿಸುವಂತೆ ಪ್ರತಿ ಶಿಕ್ಷಕರಿಗೂ ಡಯಟ್ ಮಾರ್ಗದರ್ಶನದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಜೂನ್ ಆರಂಭದಿಂದಲೇ ಅನುಷ್ಠಾನಗೊಳಿಸಲು ಅವರು ಹೇಳಿದರು.
ಹುಬ್ಬಳ್ಳಿ ಶಹರ, ಧಾರವಾಡ ಶಹರ, ಕುಂದಗೋಳ ಹಾಗೂ ನವಲಗುಂದ ತಾಲೂಕುಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆಯಾಗಿದ್ದು, ಮುಂಬರುವ ಪರೀಕ್ಷೆಯಲ್ಲಿ ವೃದ್ಧಿಯಾಗಬೇಕು. ಈ ತಾಲೂಕುಗಳ ಫಲಿತಾಂಶ ಹಾಗೂ ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಹೊಂದಿದ ಎಲ್ಲ ಶಾಲೆಗಳಿಗೆ ಶಿಕ್ಷಣ ಇಲಾಖೆಯ ಅಽಕಾರಿಗಳು ಭೇಟಿ ನೀಡಿ, ವಾಸ್ತವ ಸ್ಥಿತಿಯ ವರದಿ ಸಲ್ಲಿಸಲು ನಿರ್ದೇಶಿಸಿದರು.
ಶಾಲೆಗಳು ಜೂ. 1ರಿಂದ ಆರಂಭವಾಗುತ್ತಿದ್ದು, ಶಾಲೆ ಕಟ್ಟಡ ಸುಸ್ಥಿತಿಯಲ್ಲಿರುವಂತೆ ಮುರ್ತುವಜಿ ವಹಿಸಬೇಕು. ಸಿವಿಲ್ ಕಾಮಗಾರಿಗಳ ಅಗತ್ಯವಿದ್ದಲ್ಲಿ ಮಾಹಿತಿ ನೀಡಬೇಕು. ಮಧ್ಯಾಹ್ನದ ಬಿಸಿಯೂಟ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕುಎಂದು ತಿಳಿಸಿದರು.
ಡಿಡಿಪಿಐ ಉಮೇಶ ಬೊಮ್ಮಕ್ಕನವರ ಸ್ವಾಗತಿಸಿ, ಸಭೆ ನಿರ್ವಹಿಸಿದರು. ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಯಟ್ ಪ್ರಾಚಾರ್ಯ ಬಸವರಾಜ ನಾಲ್ವತವಾಡ ವೇದಿಕೆಯಲ್ಲಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಸೇರಿ ಎಲ್ಲ ಬಿಇಒಗಳು, ವಿಷಯ ನಿರೀಕ್ಷಕರು, ಉಪನಿರ್ದೇಶಕರ ಕಚೇರಿಯ ಸಂಯೋಜಕರು ಹಾಗೂ ಸಮನ್ವಯಾಽಕಾರಿಗಳು, ಶಾಲೆಗಳ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು.