NO drugs ಹುಬ್ಬಳ್ಳಿಯ ಸನಾ ಕಾಲೇಜಿನ ವತಿಯಿಂದ ಮಾದಕ ವಸ್ತು ವಿರೋಧಿ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಮೊಹಮ್ಮದ ಹುಸೇನ್​ ಮಳಗಿ, ಸಿಕಂದರ್​ ಖಾನ್​, ನಾಗೇಶ, ಸೋನಿಯಾ ಪದ್ಮಸಿ, ಶೇಖ್​ ಮುಜೀಬುರ್​ ರೆಹಮಾನ್​, ಮೊಹಮ್ಮದ್​ ಅಯೂಬ್​ ಸವಣೂರ ಇತರರು ಇದ್ದರು. 
ಧಾರವಾಡ

NO drugs ದುಶ್ಚಟದಿಂದ ಯುವಕರ ಆರೋಗ್ಯ ಹಾಳು

ಪ್ರಮುಖ ಮುಖ್ಯಾಂಶಗಳು

  • ಸನಾ ಕಾಲೇಜಿನಲ್ಲಿ ಮಾದಕ ವಸ್ತು ಜಾಗೃತಿ
  • ಹುಬ್ಬಳ್ಳಿಯ ವಿವಿಧೆಡೆ ಸಂಚರಿಸಿದ ಜಾಥಾ
ಹುಬ್ಬಳ್ಳಿ: NO drugs ಇಲ್ಲಿಯ ಭೈರಿದೇವರಕೊಪ್ಪದ ಸನಾ ಗ್ರೂಪ್​ ಆಫ್​ ಇನ್​ಸ್ಟಿಟ್ಯೂಷನ್ಸ್​ ವತಿಯಿಂದ ಮಾದಕ ವಸ್ತು ವಿರೋಧಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.
ಸಮಾಜದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಫಲಕ ಹಿಡಿದು ಘೋಷಣೆ ಕೂಗುವ ಮೂಲಕ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು. ಶಾಂತಿನಿಕೇತನ ಕಾಲನಿಯ ರಸ್ತೆಗಳಲ್ಲಿ ವಿದ್ಯಾರ್ಥಿಗಳು ರ್ಯಾಲಿ ನಡೆಸಿದರು.
ನಗರದ ವಿವಿಧ ಕಡೆಗಳಲ್ಲಿ ಸಂಚರಿಸಿದ ಜಾಥಾದಲ್ಲಿ ಸಾರ್ವಜನಿಕರು ಸಹ ಭಾಗಿಯಾಗಿ ಮಾದಕ ವಸ್ತುಗಳ ಬಗ್ಗೆ ಮಾಹಿತಿ ಪಡೆದರು.
ಸನಾ ಗ್ರೂಪ್​ ಅಧ್ಯಕ್ಷ ಮೊಹಮ್ಮದ್​ ಹುಸೇನ್​ ಮಳಗಿ ರ್ಯಾಲಿಗೆ ಚಾಲನೆ ನೀಡಿದರು. ಸನಾ ಗ್ರೂಪ್​ನ ವಿವಿಧ ಶಿಕ್ಷಣ ಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.
ಸನಾ ಗ್ರೂಪ್​ ಆಫ್​ ಇನ್​ಸ್ಟಿಟ್ಯೂಷನ್ಸ್​ ಸಿಕಂದರ್​ ಖಾನ್​, ನಾಗೇಶ್​ ಹಾಗೂ ಶಾಂತಿನಿಕೇತನ ಕಾಲನಿ ಗಣ್ಯರು ಉಪಸ್ಥಿತರಿದ್ದರು. ಸೋನಿಯಾ ಪದ್ಮಸಿ, ಪ್ರಾಂಶುಪಾಲ ಶೇಖ್​ ಮುಜೀಬುರ್​ ರೆಹಮಾನ್​, ಕಾರ್ಯನಿರ್ವಾಹಕ ಟ್ರಸ್ಟಿ ಮೊಹಮ್ಮದ್​ ಅಯೂಬ್​ ಸವಣೂರ, ಟ್ರಸ್ಟಿ ಸರ್ಫರಾಜ್​ ಅತ್ತಾರ್​ ಪಾಲ್ಗೊಂಡಿದ್ದರು.