ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ  
ಧಾರವಾಡ

ಹೊಸ ಸಂಶೋಧನೆಗಳ ಅಗತ್ಯವಿದೆ

ಜಗದೀಶ ಹೊಂಬಳಿ
ಧಾರವಾಡ: ಭವಿಷ್ಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಇಂದಿನ ಯುವ ಸಂಶೋಧಕರು ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಸಿದ್ದಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿರುವ `ಕ್ವಾಂಟಮï ಭೌತಶಾಸ್ತ್ರದ 100 ವರ್ಷಗಳು: ಬೆಳವಣಿಗೆಗಳು ಮತ್ತು ನಾವಿನ್ಯ ಭೌತಿಕತೆಯಲ್ಲಿ ಬಹುಶಿಸ್ತೀಯ ಅನ್ವಯಿಕೆಗಳು' ವಿಷಯದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಯುವ ಸಂಶೋಧಕರು ಕ್ವಾಂಟಮï ಭೌತಶಾಸ್ತ್ರ ವಿಷಯದ ಕುರಿತ ಹೊಸ ರೀತಿಯ ಸಂಶೋಧನೆಗಳನ್ನು ನಡೆಸುವ ಅಗತ್ಯವಿದೆ. ಪ್ರಮುಖವಾಗಿ ಲೇಸರ್ ಲೇಪ್ರೊಸ್ಕೊಪಿ, ಕ್ವಾಂಟಮï ಕಂಪ್ಯೂಟಿoಗ್ ತಂತ್ರಜ್ಞಾನಗಳು ಹೆಚ್ಚು ಮುನ್ನಲೆಗೆ ಬರುತ್ತಿದ್ದು, ಈ ತಂತ್ರಜ್ಞಾನಗಳನ್ನು ವೈದ್ಯಕೀಯ ಚಿಕಿತ್ಸೆ ಮತ್ತು ಕಂಪ್ಯೂಟಿo
ಗ್ ಕ್ಷೇತ್ರದಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತಿದೆ . ಆದ್ದರಿಂದ ಇಂದು ಭೌತಶಾಸ್ತ್ರದ ವ್ಯಾಪ್ತಿಯು ಹೊಸ ವಿಷಯಗಳನ್ನು ಒಳಗೊಂಡು ತನ್ನ ವಿಶಾಲವಾಗಿ ಬೆಳೆದಿದೆ ಎಂದರು.
ಕಲಬುರ್ಗಿ ವಿವಿ ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ. ಮೂಲಿಮನಿ ಮಾತನಾಡಿ, ಕ್ವಾಂಟಮï ಮೆಕ್ಯಾನಿಕ್ಸ್, ಕ್ವಾಂಟಮï ತಂತ್ರಜ್ಞಾನ ಮತ್ತು ಕ್ವಾಂಟಮï ಕಂಪ್ಯೂಟಿoಗ್ ತಂತ್ರಜ್ಞಾನಗಳು ಪ್ರಸ್ತುತ ಹೊಸ ವಿಸ್ಮಯ ಸೃಷ್ಟಿಸುವ ತಂತ್ರಜ್ಞಾನಗಳಾಗಿವೆ. ಪ್ರತಿಯೊಬ್ಬ ಸಂಶೋಧಕನು ಭೌತಶಾಸ್ತ್ರ ಸಂಶೋಧನೆಯಲ್ಲಿ ಹೊಸ ಅನ್ವೇಷಣೆ ಕಂಡುಕೊಳ್ಳುತ್ತಾನೆ. ಭೌತಶಾಸ್ತ್ರದಲ್ಲಿ ಹೊಸತನ, ಅನ್ವೇಷಣೆ ಮಾಡುವಲ್ಲಿ ಆಸಕ್ತಿ ತೋರಬೇಕು ಎಂದರು.
ಬೆoಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಗೌರವಾನ್ವಿತ ಪ್ರಾಧ್ಯಾಪಕ ಪ್ರೊ. ಎಸ್. ಉಮಾಪತಿ ಮಾತನಾಡಿದರು. ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ ಅಧ್ಯಕ್ಷತೆ ವಹಿಸಿದ್ದರು. ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ ಯ ಪ್ರೊ. ಎಸ್.ಎಂ. ಶಿವಪ್ರಸಾದ್, ಪ್ರೊ. ಆರ್.ಪ್ರಭು, ಜವಾಹರಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಪ್ರೊ. ಗಿರಿಧರ್ ಕುಲಕರ್ಣಿ, ಪ್ರೊ. ಎನ್.ಎಸ್. ವಿಧ್ಯಾಽರಾಜಾ, ಪ್ರೊ. ಉಷಾದೇವಿ, ಪ್ರೊ. ಬಿ.ಎ. ಕಾಗಲಿ, ಪ್ರೊ. ಎಂ.ಕೆ. ರಬಿನಾಳ, ಕಲಬುರ್ಗಿ ವಿವಿ ಪ್ರೊ. ವಿ.ಎಂ. ಜಾಲಿ, ಕರ್ನಾಟಕ ಭೌತಶಾಸ್ತ್ರ ಸಂಘದ ಅಧ್ಯಕ್ಷ ಪ್ರೊ. ಎಂ.ಎಸ್. ಜೋಗದ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಲಿದ್ದಾರೆ.