neet protest ಮಾನವ ಹಕ್ಕುಗಳ ಹೋರಾಟಗಾರ ಸೋನಮ್ ವಾಂಗ್ಚುಕ್ ಸತ್ಯಾಗ್ರಹ ಬೆಂಬಲಿಸಿ ವಿವಿಧ ಜನಪರ ಸಂಘಟನೆಗಳನ್ನೊಳಗೊಂಡ ’ಸಮಾನತೆಗಾಗಿ ನಾವು ವೇದಿಕೆ’ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು. 
ಧಾರವಾಡ

neet protest ಸೋನಮ್ ವಾಂಗ್ಚುಕ್ ಬಂಧನಕ್ಕೆ ಖಂಡನೆ

ಹುಬ್ಬಳ್ಳಿ: neet protest ಮಾನವ ಹಕ್ಕುಗಳ ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತು ವಿದ್ಯಾರ್ಥಿಗಳು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇದನ್ನು ಬೆಂಬಲಿಸಿ ವಿವಿಧ ಜನಪರ ಸಂಘಟನೆಗಳನ್ನೊಳಗೊಂಡ ’ಸಮಾನತೆಗಾಗಿ ನಾವು ವೇದಿಕೆ’ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು,
ನಂತರ ತಹಸಿಲ್ ಕಚೇರಿಗೆ ತೆರಳಿದರು. ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿದರು.
ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಮತ್ತು ವಿದ್ಯಾರ್ಥಿಗಳನ್ನು ಅಮಾನವೀಯವಾಗಿ ಬಂಧಿಸಿ ಹಾಗೂ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರವಾಹ ನಡೆಸಿರುವುದನ್ನು ಖಂಡಿಸಿದರು.
ನೀಟ್ ಪರೀಕ್ಷೆಯ ಅವಾಂತರ, ಲಕ್ಷಾಂತರ ಮಕ್ಕಳ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಬೇಕು. ಚಳವಳಿಗಾರರೊಂದಿಗೆ ಪ್ರಜಾಸತ್ತಾತ್ಮಕವಾಗಿ ಮಾತುಕತೆ ನಡೆಸಿ ಆದ ಪ್ರಮಾದಗಳಿಗೆ ಸೂಕ್ತ ಕ್ರಮವಹಿಸುವ ಬದಲಾಗಿ ಕೇಳಿದವರ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯ. ವಾಂಗ್ಚುಕ್ ಹೋರಾಟಕ್ಕೆ ಬೆಂಬಲಿಸುವುದಾಗಿ ಘೋಷಿಸಿದರು.
ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಬಿ.ಎಸ್. ಸೊಪ್ಪಿನ, ಸನತಕುಮಾರ ಬೆಳಗಲಿ, ಬಸವರಾಜ ಸೂಳಿಭಾವಿ, ಮಹೇಶ ಪತ್ತಾರ, ಅನ್ವರ ಮುಧೋಳ, ನಾಗರಾಜ ಗುರಿಕಾರ, ಗುರುನಾಥ ಉಳ್ಳಿಕಾಶಿ, ಪ್ರೊ.ವಿ.ಬಿ. ಮಾಗನೂರ, ಶಾಕೀರ ಸನದಿ, ಶ್ಯಾಮಲಾ ಗುರುಪ್ರಸಾದ, ಬಷೀರ ಮುಧೋಳ, ಮಂಜುಳಾ ಬೆಣಗಿ, ಬಾಬಾಜಾನ್ ಮುಧೋಳ, ಮಹಾಂತಪ್ಪ ನಂದೂರ, ಮಲ್ಲಪ್ಪ ತಡಸದ ಇತರರು ಪ್ರತಿಭಟನೆಯಲ್ಲಿದ್ದರು.