ncc environment ಹುಬ್ಬಳ್ಳಿಯ 27ನೇ ಕರ್ನಾಟಕ ಬಟಾಲಿಯನ್ ಎನ್ಸಿಸಿ ವಾರ್ಷಿಕ ತರಬೇತಿ ಶಿಬಿರವನ್ನು (ಎಟಿಸಿ) ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆಸುತ್ತಿದ್ದು, ಶುಕ್ರವಾರ ವಿಶ್ವ ಪರಿಸರ ದಿನದ ಅಂಗವಾಗಿ ಸೇನಾ ವಿಭಾಗದ 521 ಎನ್ಸಿಸಿ ಕೆಡೆಟ್ಗಳಿಂದ ಸಸಿ ನೆಡುವ ಅಭಿಯಾನ ನಡೆಸಲಾಯಿತು.
- ಸಸಿ ನೆಡುವ ಅಭಿಯಾನ ಮೂಲಕ ಜಾಗೃತಿ
- ಕವಿವಿ ಆವರಣದಲ್ಲಿ ಪರಿಸರ ಸಂರಕ್ಷಣೆಯ ಪ್ರತಿಜ್ಞೆ
ಹುಬ್ಬಳ್ಳಿ: ncc environment ಇಲ್ಲಿಯ 27ನೇ ಕರ್ನಾಟಕ ಬಟಾಲಿಯನ್ ಎನ್ಸಿಸಿ ವಾರ್ಷಿಕ ತರಬೇತಿ ಶಿಬಿರವನ್ನು (ಎಟಿಸಿ) ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬೆಳಗಾವಿಯ ಗ್ರೂಪ್ ಪ್ರಧಾನ ಕಚೇರಿಯ ಆಶ್ರಯದಲ್ಲಿ ನಡೆಸಲಾಗುತ್ತಿದೆ.
ವಿಶ್ವ ಪರಿಸರ ದಿನದ ಅಂಗವಾಗಿ ಶುಕ್ರವಾರ ಸೇನಾ ವಿಭಾಗದ 521 ಎನ್ಸಿಸಿ ಕೆಡೆಟ್ಗಳಿಂದ ಸಸಿ ನೆಡುವ ಅಭಿಯಾನ ನಡೆಸಲಾಯಿತು.
ಶಿಬಿರವು ಜೂನ್ 9ರ ವರೆಗೆ ನಡೆಯಲಿದ್ದು, ಹುಬ್ಬಳ್ಳಿ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳ ವಿವಿಧ ಶಾಲೆ ಮತ್ತು ಕಾಲೇಜುಗಳ ಹುಡುಗರು ಮತ್ತು ಹುಡುಗಿಯರು ಭಾಗವಹಿಸಿದ್ದಾರೆ.
ಕೆಡೆಟ್ಗಳಲ್ಲಿ ಪರಿಸರ ಜಾಗೃತಿಯನ್ನು ಉತ್ತೇಜಿಸಲು ಮತ್ತು ಸುಸ್ಥಿರ ಅಭ್ಯಾಸಗಳನ್ನು ಪ್ರೋತ್ಸಾಹಿಸಲು ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಸಸಿ ನೆಡುವ ಅಭಿಯಾನ ಆಯೋಜಿಸಲಾಗಿತ್ತು. ಕೆಡೆಟ್ಗಳು ಉತ್ಸಾಹದಿಂದ ಭಾಗವಹಿಸಿ, ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಕೊಡುಗೆ ನೀಡುವ ಪ್ರತಿಜ್ಞೆ ಸ್ವೀಕರಿಸಿದರು.
ಎನ್ಸಿಸಿ ಬೆಳಗಾವಿಯ ಗ್ರೂಪ್ ಕಮಾಂಡರ್ ಕರ್ನಲ್ ಸಿ. ರಾಜಶೇಖರ್ ಅತಿಥಿಗಳಾಗಿದ್ದರು. ಪರಿಸರ ಸಂರಕ್ಷಣೆಯ ಮಹತ್ವವನ್ನು ಅವರು ವಿವರಿಸಿದರು.