ಧಾರವಾಡ ತಾಲೂಕಿನ ಯಾದವಾಡ ಗ್ರಾಪಂ ಕಾರ್ಯಾಲಯದ ಮೇಲೆ ಸೋಮವಾರ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿರುವುದು.
ಉಪ್ಪಿನಬೆಟಗೇರಿ: ರಾಷ್ಟ್ರಧ್ವಜ ಉಲ್ಟಾ ಹಾರಿಸುವ ಮೂಲಕ ಅಪಮಾನ ಮಾಡಿದ ಘಟನೆ ಸಮೀಪದ ಯಾದವಾಡ ಗ್ರಾಮದಲ್ಲಿ ಸೋಮವಾರ ಜರುಗಿದೆ.
ಧ್ವಜ ಸಂಹಿತೆಯ ಪ್ರಕಾರ, ಭಾರತದ ತ್ರಿವರ್ಣ ಧ್ವಜದಲ್ಲಿ ಕೇಸರಿ ಬಣ್ಣ ಯಾವಾಗಲೂ ಮೇಲ್ಭಾಗದಲ್ಲಿರಬೇಕು. ಧ್ವಜವನ್ನು ಉಲ್ಟಾ ಹಾರಿಸುವುದರಿಂದ ಕೇಸರಿ ಬಣ್ಣ ಕೆಳಗೆ ಮತ್ತು ಹಸಿರು ಬಣ್ಣ ಮೇಲಕ್ಕೆ ಬರುತ್ತದೆ. ಇದು ಚಿಕ್ಕವರಿಂದ ದೊಡ್ಡವರಿಗೂ ಗೊತ್ತು. ಆದರೆ, ಯಾದವಾಡ ಪಂಚಾಯಿತಿ ಸಿಬ್ಬಂದಿ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿಸಿ ಬೇಜವಾಬ್ದಾರಿ ತೋರಿದ್ದಾರೆ. ಇದು ಸಾರ್ವಜನರಿಗೆ ಆಕ್ರೋಶಕ್ಕೆ ಕಾರಣವಾಗಿದೆ.