nanu kafir ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ನಲ್ಲಿ ಮಂಗಳವಾರ ನಾನೂ ಕಾಫಿರ ಪುಸ್ತಕವನ್ನು ಡಾ. ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಚಕ್ರವರ್ತಿ ಸೂಲಿಬೆಲೆ, ಡಾ. ಸುಧಾಕರ ಹೊಸಳ್ಳಿ, ಶ್ರೀಧರ ನಾಡಗೀರ, ಜನಮೇಜಯ ಇದ್ದರು.
- ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಮತ
- ನಾನೂ ಕಾಫಿರ ಪುಸ್ತಕ ಬಿಡುಗಡೆ
ಹುಬ್ಬಳ್ಳಿ: nanu kafir ಅಂಬೇಡ್ಕರ್ ಅವರ ಕೆಲವೇ ಕೆಲ ವಿಷಯಗಳನ್ನು ದೇಶದ ಒಂದು ವರ್ಗಕ್ಕೆ ತಿಳಿಸಿ ಬಹಳಷ್ಟು ಸಂಗತಿಗಳಿಂದ ಅವರನ್ನು ದೂರ ಇಟ್ಟವರು ಎಡಪಂಥೀಯರು. ಆದರೆ, ಅಂಬೇಡ್ಕರ್ ಅವರ ಹಿಂದುತ್ವದ ಪ್ರೀತಿ ಅಗಾಧವಾದದ್ದು. ಅದು ಹೇಗೆಲ್ಲ ಬದಲಾಗಬೇಕು ಎಂದು ಅವರು ಬಯಸಿದ್ದರು ಎಂಬುದನ್ನು ಇದುವರೆಗೂ ತಿಳಿಸಿಕೊಡಲೇ ಇಲ್ಲ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿಷಾದಿಸಿದರು.
ಇಲ್ಲಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಮಂಗಳವಾರ ಲೋಕಹಿತ ಟ್ರಸ್ಟ್ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಂಯುಕ್ತಾಶ್ರಯದಲ್ಲಿ "ನಾನೂ ಕಾಫಿರ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಅಸ್ಪ್ರಶ್ಯತೆ ತೊಡೆದು ಹಾಕಿ ಹಿಂದೂ ಧರ್ಮವನ್ನು ಪುನರ್ ರೂಪಿಸಲು ಕೆಲಸ ಮಾಡಿದ್ದು ಅಂಬೇಡ್ಕರ್. ಆದರೆ, ದೇಶ ಸ್ವಾತಂತ್ರ್ಯ ಪಡೆದಾಗ ಜಗತ್ತು ಮಹಾತ್ಮ ಗಾಂಧಿ ಅವರನ್ನು ಸ್ಮರಿಸಿತು. ಅಂಬೇಡ್ಕರ್ ಅವರು ಹಿಂದೂ ಧರ್ಮ ಟೀಕಿಸಿದ್ದು ನಿಜ. ಆದರೆ, ಇಸ್ಲಾಂ ಎಲ್ಲರನ್ನೂ ಒಪ್ಪಿಕೊಳ್ಳುವ ಇಚ್ಚೆ ಹೊಂದಿಲ್ಲ ಎಂದು ಅವರು ಹೇಳಿದ್ದರು. ಇನ್ನೊಂದು ದೇವರನ್ನು ಪೂಜಿಸುವವರು ಕಾಫಿರ ಎಂದು ಇಸ್ಲಾಂ ಹೇಳುತ್ತದೆ. ಇಸ್ಲಾಂ ಭಾರತಕ್ಕೆ ಹೇಗೆ ಕೆಟ್ಟದ್ದು ಎಂಬುದನ್ನು ಅಂಬೇಡ್ಕರ್ ಅವರು ಅಧ್ಯಯನ ಮಾಡಿ ಅನೇಕ ವಿಷಯಗಳನ್ನು ದಾಖಲಿಸಿದ್ದಾರೆ ಎಂದರು.
ಗೋಮಾಂಸ ತಿನ್ನಬೇಕು ಎಂದು ತಿನ್ನುವುದಲ್ಲ, ಬದಲಾಗಿ ಹಿಂದೂಗಳಿಗೆ ಅಗೌರವ ತೋರುವುದಕ್ಕಾಗಿ ಹಾಗೆ ಮಾಡಲಾಗುತ್ತದೆ. ಇಸ್ಲಾಂನ ಇಂತಹ ಮಾನಸಿಕ ಸ್ಥಿತಿಯನ್ನು ಅಂಬೇಡ್ಕರ್ ಅವರು ಅರಿತಿದ್ದರು. ಹಿಂದೂಗಳನ್ನು ನಾಶ ಮಾಡಬೇಕು ಎಂಬ ಏಕೈಕ ಉದ್ದೇಶವನ್ನು ಮುಸಲ್ಮಾನರು ಹೊಂದಿದ್ದರು ಎಂಬುದನ್ನು ಅಂಬೇಡ್ಕರ್ ಬರೆದಿದ್ದಾರೆ. ನಾನು ಭಾರತೀಯ, ಕೊನೆಯವರೆಗೂ ಭಾರತೀಯನಾಗಿ ಇರುತ್ತೇನೆ ಎಂದು ಹೇಳಿದ್ದರು ಎಂದರು.
ಲೇಖಕ ಡಾ. ಸುಧಾಕರ ಹೊಸಳ್ಳಿ ಮಾತನಾಡಿ, ಇಸ್ಲಾಂ ಹುಟ್ಟಿದಾಗಲೇ ಕಾಫಿರ ಹುಟ್ಟಿಕೊಂಡಿದೆ. ಡಾ. ಬಾಬಾಸಾಹೇಬರು ಹಿಂದು ಧರ್ಮ ಪರಿಷ್ಕರಣೆಗೆ ಒಳಪಡಬೇಕು ಎಂದಿದ್ದರು. ಹಾಗಾಗಿ ಅವರೊಬ್ಬ ಹಿಂದು ಧರ್ಮಗುರು ಎಂದೇ ಹೇಳಬೇಕು. ಕಾಫಿರ ಚಿಂತನೆಯು ಕ್ರೂರತ್ವದಿಂದ ಕೂಡಿದ್ದು, ಅಂಬೇಡ್ಕರ್ ಅವರನ್ನು ಅತ್ಯಂತ ಕಡಿಮೆ ಓದಿರುವ ದೇವನೂರ ಮಹಾದೇವ ಅವರು ಸರಿಯಾಗಿ ಓದಿಕೊಳ್ಳಲಿ ಎಂದು ಸಲಹೆ ನೀಡುವೆ ಎಂದರು.
ನಾನು ಭಾಗಿಯಾಗಿರುವುದೇ ಸಂದೇಶ