nandi properties ಹುಬ್ಬಳ್ಳಿಯಲ್ಲಿ ಶ್ರೀ ನಂದಿ ಪ್ರಾಪರ್ಟಿಸ್ 2026 ಕ್ಯಾಲೆಂಡರ್ ಅನ್ನು ಸಂಸ್ಥೆಯ ಎಂಡಿ ಬಸವರಾಜ ನಿಲೋಗಲ್ ಬಿಡುಗಡೆ ಮಾಡಿದರು.
- ಸಾರ್ವಜನಿಕರಿಗೆ ಉಚಿತ ವಿತರಣೆ
- ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಸಂದೇಶಗಳು
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಸಾರ್ವಜನಿಕ ರಂಗದಲ್ಲಿ ಹೆಸರು ಮಾಡಿರುವ ಶ್ರೀ ನಂದಿ ಪ್ರಾಪರ್ಟಿಸ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ನಿಲೋಗಲ್ ಅವರು ಇತ್ತೀಚೆಗೆ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದಾರೆ.
ಶ್ರೀ ಸಿದ್ದೇಶ್ವರ ಸ್ವಾಮೀಜಿ ಅತ್ಯಂತ ಸರಳ ಹಾಗೂ ಮಾದರಿ ಜೀವನ ನಡೆಸಿದವರು. ಅವರ ಹಿತನುಡಿಗಳು ನಮಗೆಲ್ಲ ಪ್ರೇರಣೆಯಾಗಿವೆ. ಅವರ ಶ್ರೀವಾಣಿ, ಹಿತನುಡಿಗಳು ಎಲ್ಲರಿಗೂ ತಲುಪುವ ಉದ್ದೇಶದಿಂದ ಕ್ಯಾಲೆಂಡರ್ ಮೂಲಕ ಪಸರಿಸುವ ಕೆಲಸ ಮಾಡುತ್ತಿದ್ದಾರೆ.
ಜ. 2ರಂದು ವಿಜಯಪುರದಲ್ಲಿ ಶ್ರೀಗಳ ಗುರುನಮನ ಕಾರ್ಯಕ್ರಮ ನಡೆಯುತ್ತಿದ್ದು, ಅಲ್ಲಿಯೂ ಕ್ಯಾಲೆಂಡರ್ ಉಚಿತ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಕ್ಯಾಲೆಂಡರ್ನಲ್ಲಿರುವ ಕ್ಯೂ ಆರ್ ಕೋಡ್ ಸ್ಕಾನ್ ಮಾಡಿದರೆ ಶ್ರೀಗಳ ವಾಣಿ, ಸಂದೇಶಗಳು, ಪ್ರವಚನ ಸಾರ ಎಲ್ಲವೂ ಲಭ್ಯವಾಗಲಿದೆ. ಜನರು ಅವರ ಆದರ್ಶ, ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಆಶಯ ನಮ್ಮದು ಎಂದು ನಿಲೋಗಲ್ ತಿಳಿಸಿದ್ದಾರೆ.