nakshatr van ಹುಬ್ಬಳ್ಳಿಯ ನವನಗರದ ರಮಿಲಾ ಹಾಸ್ಪೈಸ್​ ಆವರಣದಲ್ಲಿ ನಿರ್ಮಿಸಿರುವ ನಕ್ಷತ್ರ ವನ ಮತ್ತು ಪಂಚವಟಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಜೇಥಿಯಾ ಫೌಂಡೇಷನ್​ ಚೇರ್ಮನ್​ ಜಿತೇಂದ್ರ ಮಜೇಥಿಯಾ, ಡಾ. ಬಿ.ಆರ್​. ಪಾಟೀಲ, ರಮಿಲಾ ಮಜೇಥಿಯಾ, ನಂದಿನಿ ಮಜೇಥಿಯಾ, ಕಷ್ಯಪ ಮಜೇಥಿಯಾ, ಸುನಿಲಕುಮಾರ ಕುಕ್ಕನೂರ, ಅಮರೇಶ ಹಿಪ್ಪರಗಿ ಇತರರು ಇದ್ದರು. 
ಧಾರವಾಡ

nakshatr van ಮರ ಕಡಿತದಿಂದ ಬಿಸಿಲ ತಾಪ ಹೆಚ್ಚಳ

ಪ್ರಮುಖ ಮುಖ್ಯಾಂಶಗಳು

  • ಶಿವ ಶಾಂತವೀರ ಶ್ರೀ ಬೇಸರ
  • ನಕ್ಷತ್ರ ವನ ಪಂಚವಟಿ ಲೋಕಾರ್ಪಣೆ

ಹುಬ್ಬಳ್ಳಿ: nakshatr van ಪರಿಸರದಲ್ಲಿ ಆಮ್ಲಜನಕ ಹೆಚ್ಚಿಸಿ ಚೈತನ್ಯ ತುಂಬುವ ಶಕ್ತಿ ಹೊಂದಿರುವ ನಕ್ಷತ್ರ ವನ ಹಾಗೂ ಪಂಚವಟಿಯನ್ನು ನವನಗರದ ರಮಿಲಾ ಹಾಸ್ಪೈಸ್​​ ಆವರಣದಲ್ಲಿ

ನಿರ್ಮಿಸಲಾಗಿದೆ.

ಮಜೇಥಿಯಾ ಫೌಂಡೇಷನ್​ ವತಿಯಿಂದ 27 ಜನ್ಮ ನಕ್ಷತ್ರಗಳಿಗೆ ಅನುಗುಣವಾಗಿ ಸಿದ್ಧಪಡಿಸಿರುವ ನಕ್ಷತ್ರ ವನವನ್ನು ಲೋಕಾರ್ಪಣೆ ಮಾಡಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಚಿಕೇನಕೊಪ್ಪ ಚನ್ನವಿರ ಶರಣರ ಆಶ್ರಮದ ಶ್ರೀಶಿವ ಶಾಂತವೀರ ಶರಣರು, ಈ ಹಿಂದೆ ಬೇಸಿಗೆ ಬಂದರೂ ಬಿಸಿಲಿನ ತಾಪ ಅಷ್ಟಾಗಿ ಇರುತ್ತಿರಲಿಲ್ಲ. ಈಗ ಮರಗಳ ಕಡಿತದಿಂದ ಬಿಸಿಲ ತಾಪ ಹೆಚ್ಚಾಗುತ್ತಿದೆ. ಇಂತಹ ವನಗಳಿಂದ ಒಂದಿಷ್ಟು ನೆಮ್ಮದಿ ಸಿಗುತ್ತದೆ ಎಂದರು.
ಪರಿಸರ ತಜ್ಞ ರಾಜೇಂದ್ರ ಬಿಜಾಪೂರ ಮಾತನಾಡಿ, ನಕ್ಷತ್ರ ವನದಲ್ಲಿನ ಗಿಡಗಳು ಪರಿಸರಕ್ಕೆ ಸಾಕಷ್ಟು ಪ್ರಮಾಣದ ಆಮ್ಲಜನಕ ನೀಡುತ್ತವೆ. ನಾವು ಈ ಭೂಮಿಯ ಮೇಲೆ ಜನಿಸಿದ್ದೇವೆ ಎಂದರೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂದು ಹೇಳಿದರು.
ಬೆಳಗಾವಿ ಕೆಎಲ್​ ಇನ್​ಸ್ಟಿಟ್ಯೂಟ್​ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುಹಾಸಕುಮಾರ ಶೆಟ್ಟಿ ಮಾತನಾಡಿ, ಮನೆಯಲ್ಲಿಯೇ ನಾವು ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಎಷ್ಟೋ ರೋಗಗಳನ್ನು ಹತೋಟಿಯಲ್ಲಿಡಬಹುದಾಗಿದೆ ಎಂದರು.

ಳಾದ ಡಾ. ವಿ.ಬಿ. ನಿಟಾಲಿ, ವೈದ್ಯಾಧಿಕಾರಿ ಡಾ. ನಾಗರಾಜರಾವ್​ ಸಾನು, ಸಿಇಒ ಡಾ. ಸುನೀಲಕುಮಾರ ಕೆ., ವಸುಂಧರಾ

ಫೌಂಡೇಷನ್

​ನ ಮೇಘರಾಜ ಕೆರೂರ, ಗ್ರೋಗ್ರೀನ್​ ಪೆಡಲರ್ಸ್​ ಮುಖ್ಯಸ್ಥ ಬಾಲಚಂದ್ರ ಡಂಗನವರ, ಇತರರು ಇದ್ದರು.