- ರಾಜೀನಾಮೆ ಅಂಗೀಕರಿಸದೇ ಹೋದರೆ ಪಾದಯಾತ್ರೆ
- ಕಾಂಗ್ರೆಸ್ನವರು ಐಎಎಸ್ ಅಧಿಕಾರಿಗೂ ತೊಂದರೆ ಕೊಡಬಹುದು.
- ಕಾಂಗ್ರೆಸ್, ರಕ್ತಬಿಜಾಸೂರನಂತೆ ಭ್ರಷ್ಟಾಚಾರವನ್ನು ಪೋಷಿಸುತ್ತ ಬಂದಿದೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜೆಡಿಎಸ್ನೊಂದಿಗೆ ಸೇರಿಕೊಂಡು ಬಿಜೆಪಿ ವಿಧಾನಸಭೆ ಹಾಗೂ ಪರಿಷತ್ನಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಹೋರಾಟ ನಡೆಸಿದೆ. ಪಾದಯಾತ್ರೆ ನಡೆಸಲು ಸಹ ತೀರ್ಮಾನಿಸಲಾಗಿತ್ತು. ಸರ್ಕಾರ ರಾಜೀನಾಮೆ ಅಂಗೀಕರಿಸದೇ ಹೋದರೆ ಪಾದಯಾತ್ರೆ ನಡೆಸಲಾಗುವುದು ಎಂದು ಹೇಳಿದರು.
ದೇಶದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಅತಿ ಹೆಚ್ಚು ಅವಧಿ ಅಧಿಕಾರ ನಡೆಸಿರುವ ಕಾಂಗ್ರೆಸ್, ರಕ್ತಬಿಜಾಸೂರನಂತೆ ಭ್ರಷ್ಟಾಚಾರವನ್ನು ಪೋಷಿಸುತ್ತ ಬಂದಿದೆ. ಸಚಿವ ನಾಗೇಂದ್ರ ಅವರು ವಾಲ್ಮೀಕಿ ನಿಗಮದ ಹಣಕ್ಕಾಗಿ ಒತ್ತಡ ಹೇರಿದ್ದರಿಂದಲೇ ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತೆಂದು ನಿಗಮದ ಅಧಿಕಾರಿ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ, ಚಾರ್ಜ್ಶೀಟ್ ಹಾಕುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಿದೆ ಎಂದು ದೂರಿದರು.
ಸಚಿವ ಬಿ. ನಾಗೇಂದ್ರ ಅವರೊಂದಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಮುಖಂಡರ ವಿರುದ್ಧವೂ ತನಿಖೆ ನಡೆಸಬೇಕು. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಒತ್ತಾಯ ಮಾಡಿದರು.
ಕೆಪಿಎಸ್ಸಿ ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಮೇಲ್ವಿಚಾರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ ಕಾಂಗ್ರೆಸ್ನ ಹೆದರಿಕೆಯಿಂದ ಕಾಣೆಯಾಗಿರಬಹುದು.
ಐಎಎಸ್ ಅಧಿಕಾರಿ ಬಾಯಿ ಬಿಟ್ಟರೆ ಅವರಿಗೆ ಕಂಟಕ ತಪ್ಪಿದ್ದಲ್ಲ. ಕಾಂಗ್ರೆಸ್ನವರು ಐಎಎಸ್ ಅಧಿಕಾರಿಗೂ ತೊಂದರೆ ಕೊಡಬಹುದು. ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ ಅವರಿಗೆ ರಕ್ಷಣೆ ಬೇಕಾದರೆ ತಕ್ಷಣ ಹಾಜರಾಗಬೇಕು.
ನಾಪತ್ತೆಯಾಗಿರುವ ಅಧಿಕಾರಿಯನ್ನು ಪತ್ತೆ ಹಚ್ಚಬೇಕಿದ್ದ ರಾಜ್ಯ ಸರ್ಕಾರ, ಆರ್ಎಸ್ಎಸ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಕ್ಕೆ ಇಬ್ಬರು ಶಿಕ್ಷಕರನ್ನು ಅಮಾನತ್ತುಗೊಳಿಸಿದೆ. ಸರ್ಕಾರ ದ್ವೇಷದ ಭಾವನೆ ಕೈಬಿಡಬೇಕು ಎಂದು ಒತ್ತಾಯ ಮಾಡಿದರು.
ಮುಖ್ಯಮಂತ್ರಿ ಅವರು ಕೇವಲ ಭ್ರಷ್ಟಾಚಾರದ ಬಗ್ಗೆ ಭಾಷಣೆ ಮಾಡಿದರೆ ಸಾಲದು. ಕೆಪಿಎಸ್ಸಿಯಲ್ಲಿ ನಡೆದಿರುವ ಹಗರಣ, ಅನ್ಯಾಯವನ್ನು ಬಯಲಿಗೆ ಎಳೆಯಬೇಕು.
ಕಾಣೆಯಾಗಿರುವ ಐಎಎಸ್ ಅಧಿಕಾರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಧಾರವಾಡ ಜಿಲ್ಲೆಯಲ್ಲಿ ಮಳೆ ಕೊರತೆ ಇದ್ದರೂ ಯಾವುದೇ ತಾಲೂಕನ್ನು ಬರಪೀಡಿತವೆಂದು ಘೋಷಿಸಿಲ್ಲ. ರಾಜ್ಯ ಸರ್ಕಾರ ವೈಜ್ಞಾನಿಕವಾಗಿ ಅಧ್ಯಯನ ನಡೆಯಿಸಿ, ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.