Nad naman ವೇದಿಕೆಯ ಖಜಾಂಚಿ ರವೀಂದ್ರ ದೇಸಾಯಿ ಮಾತನಾಡಿದರು.
- ರಾಮಚಂದ್ರ ಯಾವಗಲ್ ಸ್ಮರಣಾರ್ಥ ವಾರ್ಷಿಕ ಕಾರ್ಯಕ್ರಮ
ಹುಬ್ಬಳ್ಳಿ: Nad naman ಇಲ್ಲಿಯ ಶ್ರೀರಾಮ ಕಲಾ ವೇದಿಕೆ ವತಿಯಿಂದ ರಾಮಚಂದ್ರ ಯಾವಗಲ್ ಅವರ ಸ್ಮರಣಾರ್ಥ ನಾದ ನಮನ ವಾರ್ಷಿಕ ಸಂಗೀತ ಉತ್ಸವವನ್ನು ಏ. 19ರಂದು ಬೆಳಗ್ಗೆ 9.30ರಿಂದ ಇಡೀ ದಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ವೇದಿಕೆಯ ಖಜಾಂಚಿ ರವೀಂದ್ರ ದೇಸಾಯಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂ. ಗಣಪತಿ ಭಟ್ ಹಾಸಣಗಿ ಅವರಿಗೆ ವೇದಿಕೆಯ "ಕಲಾಶೃಂಗ' ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಧಾರವಾಡದ ರಾಮಕೃಷ್ಣ ಮಠದ ಸ್ವಾಮಿ ವಿಜಯಾನಂದ ಮಹಾರಾಜ ಅವರು ಕಾರ್ಯಕ್ರಮದ ಸಾನ್ನಿಧ್ಯ ಹಾಗೂ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಪದ್ಮಶ್ರೀ ಪಂಡಿತ ಎಂ. ವೆಂಕಟೇಶಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮುಂತಾದ ಗಣ್ಯರು ಪಾಲ್ಗೊಳ್ಳುವರು. ವಿದ್ಯಾರ್ಥಿ ವೇತನ ಪಡೆದ ಕಲಾವಿದರು ಸಂಗೀತ ಸೇವೆ ನೀಡಲಿದ್ದಾರೆ ಎಂದರು.
ಪುಟ್ಟರಾಜ ವೆಂಕಟಾಪುರ ಗಾಯನ, ಸಂಕೇಶ ಮಸಣಿ ಹಾರ್ಮೋನಿಯಂ, ಕನ್ನಯ್ಯ ಕೊಡೇಕಲ್ ತಬಬಾ, ಅನಘ ಸಖತಂಕರ್ ಸಿತಾರ್, ಪ್ರದ್ಯುಮ್ನ ಕರ್ಪೂರ ತಬಲಾ ವಾದನ ನಡೆಸಿಕೊಡುವರು. ಹಿಂದುಸ್ತಾನಿ ಗಾಯನ ಪಂಡಿತ ಗಣಪತಿ ಭಟ್ ಹಾಸಣಗಿ, ಪಂಡಿತ ಶ್ರೀಪಾದ ಹೆಗಡೆ ಸಹ ಗಾಯನ, ತಬಲಾ ಗೋಪಾಲಕೃಷ್ಣ ಹೆಗಡೆ, ಹಾರ್ಮೋನಿಯಂ ಅಜಯ ಹೆಗಡೆ ಪ್ರಸ್ತುತ ಪಡಿಸಲಿದ್ದಾರೆ ಎಂದು ಹೇಳಿದರು.