ಡಾ. ಮಖ್ದೂಮ್ ಕಿಲ್ಲೇದಾರ ಅವರು ಎನ್ಎಬಿಎಚ್ ಮಾನ್ಯತಾ ಪ್ರಮಾಣಪತ್ರವನ್ನು ವೈದ್ಯಕಿಯ ನಿರ್ದೇಶಕ ಡಾ. ನಿರಂಜನ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಧಾರವಾಡ: ನಗರದ ಎಸ್ಡಿಎಂ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಗೆ ಎನ್ಎಬಿಎಚ್ (ರಾಷ್ಟ್ರೀಯ ಮಾನ್ಯತಾ ಮಂಡಳಿ) ಮಾನ್ಯತೆ ಲಭಿಸಿದೆ. ಮಾನ್ಯತೆ ಪ್ರಕ್ರಿಯೆಯು 2021ರಲ್ಲಿ ಆರಂಭವಾಗಿ 2025ರ ಜೂನ್ನಲ್ಲಿ ಎನ್ಎಬಿಎಚ್ ಪರೀವಿಕ್ಷಣೆ ನಡೆದು ಮಾನ್ಯತೆ ಲಭಿಸಿದೆ.
ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯಕಿಯ ಅಧೀಕ್ಷಕ ಡಾ. ಕಿರಣ್ ಹೆಗ್ಡೆ ಮತ್ತು ಉಪ ವೈದ್ಯಕಿಯ ಅಧೀಕ್ಷಕ ಮತ್ತು ಗುಣಮಟ್ಟ ಭರವಸೆ ಕೋಶದ ಮುಖ್ಯಸ್ಥ ಡಾ. ಮಖ್ದೂಮ್ ಕಿಲ್ಲೇದಾರ ಅವರು ಎನ್ಎಬಿಎಚ್ ಮಾನ್ಯತಾ ಪ್ರಮಾಣಪತ್ರವನ್ನು ವೈದ್ಯಕಿಯ ನಿರ್ದೇಶಕ ಡಾ. ನಿರಂಜನ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಈ ವೇಳೆ ಡಾ. ನಿರಂಜನ್ ಕುಮಾರ್ ಮಾತನಾಡಿ, ದೈನಂದಿನ ಕೆಲಸದಲ್ಲಿ ಗುಣಮಟ್ಟದ ಸೇವೆಯ ಕಡೆ ಗಮನವಿರಬೇಕು. ಉದ್ಯೋಗದಲ್ಲಿ ಪರಿರ್ಪೂಣತೆಯು ಧ್ಯೇಯವಾಗಬೇಕು. ರೋಗಿಗಳಿಗೆ ಸೇವೆ ಸಲ್ಲಿಸುವಾಗ ದಕ್ಷತೆ ಮತ್ತು ಪ್ರೀತಿ ಇರಬೇಕು ಎಂದರು.
ಸಹ ಉಪ ಕುಲಪತಿ ವಿ. ಜೀವಂಧರ್ ಕುಮಾರ್, ಆಡಳಿತ ನಿರ್ದೇಶಕ ಸಾಕೇತ್ ಶೆಟ್ಟಿ, ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಪ್ರಾಚಾರ್ಯ ಡಾ. ವಿಜಯ್ ಕುಲಕಣಿರ್, ಕೋರ್ ಕಮಿಟಿ ಮತ್ತು ಸ್ಟೀರಿಂಗ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.