ಭಾರ್ಗವಿ ಕುಲಕರ್ಣಿ 
ಧಾರವಾಡ

ಸಂಗೀತ ಸಂಸ್ಕಾರ ಕಾರ್ಯಕ್ರಮ 21ರಂದು

ಜಗದೀಶ ಹೊಂಬಳಿ
ಧಾರವಾಡ: ವಿಶ್ವ ಸಂಗೀತ ದಿನದ ಅಂಗವಾಗಿ ಧಾರವಾಡ ಪದ್ಮಶ್ರೀ ಸಂಗೀತ ಪ್ರತಿಷ್ಠಾನದಿಂದ ಹೊಸ ಬಸ್ ನಿಲ್ದಾಣದ ಗಾಂಧಿಭವನದಲ್ಲಿ ಜೂ. 21ರಂದು ಸಂಜೆ 4 ಗಂಟೆಗೆ ಸಂಗೀತ ಸಂಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಾರ್ಗವಿ ಕುಲಕರ್ಣಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಶಾಸಕ ಅಮೃತ ದೇಸಾಯಿ ಕಾರ್ಯಕ್ರಮ ಉದ್ಘಾಟಿಸುವರು. ಮಹಾನಗರ ಪಾಲಿಕೆ ಸದಸ್ಯೆ ಅನಿತಾ ಚಳಗೇರಿ, ಪಾಲಿಕೆಯ ವಲಯ ಕಚೇರಿ 3ರ ಸಹಾಯಕ ಆಯುಕ್ತ ಅರವಿಂದ ಜಮಖಂಡಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಸಿತಾರ ಕಲಾವಿದ ನೂರ್ ಜಹಾನ್‌ನದಾಫ್, ಶಾಸ್ತ್ರೀಯ ಸಂಗೀತ ಕಲಾವಿದ ಉಮೇಶ ಮನವಳ್ಳಿ, ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದೆ ಭಾರ್ಗವಿ ಗುಡಿ ಸಂಗೀತ ಕಾರ್ಯಕ್ರಮ ನೀಡುವರು. ವಿಜಯಕುಮಾರ ಸುತಾರ, ಅಮೋಘ ಮುನವಳ್ಳಿ ತಬಲಾ ಸಾಥ್ ಹಾಗೂ ಪ್ರಮೋದ ಹೆಬ್ಬಳ್ಳಿ, ಮಂಜುನಾಥ ವೆಂಕಟಾಪುರ ಹಾರ್ಮೋನಿಯಂ ಸಾಥ್ ನೀಡುವರು ಎಂದು ತಿಳಿಸಿದರು.
ಪ್ರಸ್ತುತ ಪಾಶ್ಚಿಮಾತ್ಯ ಸಂಗೀತದತ್ತ ಒಲವು ಜಾಸ್ತಿಯಾಗುತ್ತಿರುವುದು ಕಳವಳಕಾರಿ ಸಂಗತಿ. ನಮ್ಮಶಾಸ್ತ್ರೀಯ ಸಂಗೀತ ಉಳಿಸಿ, ಬೆಳೆಸುವ ಅಗತ್ಯವಿದೆ. ನಮ್ಮ ಸಂಗೀತ ಪ್ರತಿಷ್ಠಾನ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.