ಹೊಸ ವರ್ಷದ ದಿನವೇ ಹೆಂಡತಿ ಕೊಲೆ (murder)
ಹುಬ್ಬಳ್ಳಿ: ಹೊಸ ವರ್ಷದ ದಿನದಂದೇ ಹೆಂಡತಿಯನ್ನು ಹೊಡೆದು ಕೊಲೆ (murder) ಮಾಡಿರುವ ಘಟನೆ ಇಲ್ಲಿಯ ನ್ಯೂ ಆನಂದ ನಗರದಲ್ಲಿ ನಡೆದಿದೆ.
ಅಂಜುಮ್ (32) ಕೊಲೆಯಾದ ಮಹಿಳೆ. ಪತಿ ಮೆಹಬೂಬ್ ಗುರುವಾರ ಬೆಳೆಗ್ಗೆ ಮನೆಯ ಬೆಡ್ ರೂಮ್‌ನಲ್ಲಿ ಪತ್ನಿಯನ್ನು ಕ್ಷುಲ್ಲಕ ಕಾರಣಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಯಾದ ಮಹಿಳೆ ಮೆಹಬೂಬ್‌ಗೆ ಎರಡನೇ ಪತ್ನಿ ಎನ್ನಲಾಗಿದೆ.
ಸ್ಥಳಕ್ಕೆ ಹಳೇಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮೆಹಬೂಬ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.