success ಹುಬ್ಬಳ್ಳಿಯ ರೈಲ್ವೆ ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಸಮುದಾಯ ವೇದಿಕೆ ಕಾರ್ಯಕ್ರಮದಲ್ಲಿ ರಾಜಭಾಷಾ ಅಧಿಕಾರಿ ಪ್ರೇಮಚಂದ್ರ ಮಾತನಾಡಿದರು.
- ರೈಲ್ವೆ ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲೆಯಲ್ಲಿ ಸಮುದಾಯ ವೇದಿಕೆ ಕಾರ್ಯಕ್ರಮ.
- ಹಲವು ಭಾಷೆಗಳ ಜ್ಞಾನ ಹೊಂದಿರುವುದು ಅಗತ್ಯ.
- ರಾಜಭಾಷೆ ಹಿಂದಿ ದೇಶದ ಕ್ರೀಡೆ, ಸಂಸ್ಕೃತಿ ಅರಿಯಲು ಸಹಾಯಕವಾಗುತ್ತದೆ.
ಹುಬ್ಬಳ್ಳಿ :
ಗದಗ ರಸ್ತೆಯಲ್ಲಿನ ರೈಲ್ವೆ ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಸಮುದಾಯ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಪ್ರಾದೇಶಿಕ ಭಾಷೆಗಳು ಹಾಗೂ ಅಧಿಕೃತ ಭಾಷೆ (ರಾಜಭಾಷೆ ಹಿಂದಿ) ಎರಡರ ಮಹತ್ವ ವಿವರಿಸಿದ ಅವರು, ರಾಜಭಾಷೆ ಹಿಂದಿ ದೇಶದ ಕ್ರೀಡೆ, ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಜ್ಞಾನ ವಿನಿಮಯದ ವಿವಿಧ ಕ್ಷೇತ್ರಗಳನ್ನು ಅರಿಯಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಸಾಹಿತಿ ಹಾಗೂ ವಿಭಾಗೀಯ ಸಿಬ್ಬಂದಿ ಅಧಿಕಾರಿ ಸಿ.ಎಂ. ಮುನಿಸ್ವಾಮಿ ಮಾತನಾಡಿ, ಒಬ್ಬ ಉತ್ತಮ ಸಾಹಿತಿಗೆ ಅತ್ಯುತ್ತಮ ಸಾಹಿತ್ಯ ರಚಿಸಲು ಹಲವು ಭಾಷೆಗಳ ಜ್ಞಾನ ಹೊಂದಿರುವುದು ಅಗತ್ಯ ಎಂದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಅನಂತ ಭಾಗವತ್ ಮತ್ತು ರಾಷ್ಟ್ರೀಯ ಮಟ್ಟದ ಅಥ್ಲೀಟ್ ಬಸವರಾಜ ಎಂ.ಕೆ. ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಕ್ರೀಡಾ ಕ್ಷೇತ್ರದ ಅನುಭವಗಳನ್ನು ಹಂಚಿಕೊಂಡರು.
ಪ್ರಾಂಶುಪಾಲ ಇ. ನಾಗಪ್ಪ ಅವರು, ಭಾಷೆ, ಕ್ರೀಡೆ ಮತ್ತು ಕರ್ನಾಟಕದ ಶ್ರೀಮಂತ ಸಂಸ್ಕೃತಿ ಕುರಿತು ಮಾತನಾಡಿದರು.
ರಾಜಭಾಷಾ ಶಾಖೆಯ ಮಹಾರುದ್ರಪ್ಪ ಬಳ್ಳಾರಿ, ರಾಜಸಾಹೇಬ್ ನದಾಫ, ಜಿ. ಆರ್. ನಾರಾಯಣಾದ್ರಿ, ಮೊಹಮ್ಮದ್ ಸಲೀಂ ಹಾಗೂ ಇತರರಿದ್ದರು.
ಮಹಬೂಬಸಾಬ್ ನಾಯ್ಕರ್ ಅವರು ನಿರೂಪಿಸಿದರು. ಅಂಜುಂ ಹೊರೇಕೇರಿ ವಂದಿಸಿದರು.