ಪೆಟ್ರೋಲ್​ ಬಂಕ್​ಗಳಿಗೆ ಮುಗಿಬಿದ್ದ ವಾಹನ ಸವಾರರು 
ಧಾರವಾಡ

ಪೆಟ್ರೋಲ್​ ಬಂಕ್​ಗಳಿಗೆ ಮುಗಿಬಿದ್ದ ವಾಹನ ಸವಾರರು

ಮಂಜುನಾಥ ಅಂಗಡಿ
ಧಾರವಾಡ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಇಂಧನ ಅಭಾವವಾಗಲಿದೆ ಎಂಬ ಸುದ್ದಿ ಹರಡಿ ನಗರದಲ್ಲಿ ಮಂಗಳವಾರ ಸಂಜೆ ವಾಹನ ಸವಾರರು ಪೆಟ್ರೋಲ್​ ಬಂಕ್​ಗಳಿಗೆ ಮುಗಿಬಿದಿದ್ದರು.
ನಗರದಲ್ಲಿ ಈಗಾಗಲೇ ಕೆಲ ಪೆಟ್ರೋಲ್​ ಬಂಕ್​ಗಳಿಗೆ ಇಂಧನ ಪೂರೈಕೆಯಾಗದ ಹಿನ್ನೆಲೆ ಬಂದ್​ ಮಾಡಲಾಗಿದೆ. ಇಂಧನ ಇರುವ ಬಂಕ್​ಗಳ ಎದುರು ಜಮಾಯಿಸಿದ ವಾಹನ ಸವಾರರು, ಇಂಧನ ಟ್ಯಾಂಕ್​ ಭತಿರ್ ಮಾಡಿಸುತ್ತಿರುವುದು ಕಂಡುಬಂತು. ಸಂಜೆ 7 ಗಂಟೆಯ ನಂತರ ಬಂಕ್​ಗಳ ಮುಂದೆ ವಾಹನಗಳ ಸರದಿ ಸಾಲು ಕಂಡುಬಂದಿತು. ಮತ್ತೆ ಕೆಲವರು ಬಾಟಲಿಗಳ ಮೂಲಕ ಪೆಟ್ರೋಲ್​ ತೆಗೆದುಕೊಂಡು ಹೋಗಿ ಶೇಖರಿಸಿ ಇಟ್ಟುಕೊಂಡರು. ನಗರ ಪ್ರದೇಶ ಸೆರಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇರುವ ಪೆಟ್ರೋಲ್​ ಬಂಕ್​ಗಳಲ್ಲೂ ವಾಹನ ದಟ್ಟಣೆ ಕಾಣಿಸಿತು.