Bright school ಹುಬ್ಬಳ್ಳಿಯ ಬ್ರೈಟ್​ ಬಿಜಿನೆಸ್​ ಸ್ಕೂಲ್​ನಲ್ಲಿ ಏರ್ಪಡಿಸಿದ್ದ "ಮೊನೆಟ್ರಿಕ್ಸ್​ 2ಕೆ25' ಸ್ಪರ್ಧೆಯಲ್ಲಿ ಜನರಲ್​ ಚಾಂಪಿಯನ್​ಶಿಪ್​ ಪಡೆದ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ತಂಡಕ್ಕೆ ಟ್ರೋಫಿ ನೀಡಲಾಯಿತು. ಜಿತೇಂದ್ರ ನಾಯಕ್​, ಡಾ. ಪ್ರಸಾದ್​ ರೂಡಗಿ, ಬಸವರಾಜ ಲಿಂಗಶೆಟ್ಟರ್​, ಪ್ರೊ. ದೀಪಕ ಇದ್ದರು. 
ಧಾರವಾಡ

Bright school ಬ್ರೈಟ್​ ಬಿ ಸ್ಕೂಲ್​ನಲ್ಲಿ ಮೊನೆಟ್ರಿಕ್ಸ್​ ಉತ್ಸವ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • 15 ಎಂಬಿಎ ಕಾಲೇಜಿನ ತಂಡಗಳು ಭಾಗಿ
  • ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ತಂಡ ಜನರಲ್​ ಚಾಂಪಿಯನ್​
ಹಣಕಾಸಿನ ವಿಷಯಗಳ ಕುರಿತು ನಾಲ್ಕು ಒಳನೋಟ ಉಳ್ಳ ಪ್ರಸ್ತುತಿಗಳು, ಉಪನ್ಯಾಸ ಮತ್ತು ಸಹಯೋಗದ ಕಲಿಕೆ ಮುಂತಾದವುಗಳು ಕಾರ್ಯಕ್ರಮದ ವಿಶೇಷವಾಗಿದ್ದವು.
ಅತಿಥಿಯಾಗಿದ್ದ ಪ್ರಮುಖ ವಾಸ್ತುಶಿಲ್ಪಿ ಆರ್​. ಜಿತೇಂದ್ರ ನಾಯಕ್​ ಮಾತನಾಡಿ, ಯಶಸ್ವಿ ವೃತ್ತೀಜಿವನಕ್ಕಾಗಿ ವಿದ್ಯಾರ್ಥಿಗಳಾಗಿದ್ದಾಗಲೇ ಆರ್ಥಿಕ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಸರಿಯಾದ ಪ್ರಯತ್ನಗಳೊಂದಿಗೆ ದೃಢ ಮನಸ್ಸು ಇದ್ದರೆ ಆರ್ಥಿಕವಾಗಿ ಸಾಕ್ಷರರಾಗುವುದು ಸುಲಭ ಎಂದರು.
ಅನುಭವದ ಕಲಿಕೆಯ ಜತೆಗೆ ಎಂಬಿಎ ವಿದ್ಯಾರ್ಥಿಗಳಲ್ಲಿ ಆರ್ಥಿಕ ಸಾಕ್ಷರತೆ ಬೆಳೆಸುತ್ತಿರುವ ಬ್ರೈಟ್​ ಬಿಜಿನೆಸ್​ ಸ್ಕೂಲ್​ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಬಿಎಸ್​ ನಿರ್ದೇಶಕ ಡಾ. ಪ್ರಸಾದ್​ ಬಿ. ರೂಡಗಿ ಮಾತನಾಡಿ, ಸೋಲು- ಗೆಲುವು ಸ್ಪರ್ಧೆಯ ಒಂದು ಭಾಗ. ಪ್ರಶಸ್ತಿಗಳು ಕಾರ್ಯಕ್ಷಮತೆ ಮತ್ತು ಸಾಮರ್ಥ್ಯದ ಸೂಚಕಗಳಾಗಿವೆ ಎಂದರು.
ಕ್ರೀಡಾಕೂಟದಲ್ಲಿ ಕರ್ನಾಟಕದ ವಿವಿಧ ಶೈಕ್ಷಣಿಕ ಸಂಸ್ಥೆಗಳಿಂದ 15 ಎಂಬಿಎ ಕಾಲೇಜಿನ ತಂಡಗಳು ಭಾಗವಹಿಸಿದ್ದವು. ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ತಂಡವು ಜನರಲ್​ ಚಾಂಪಿಯನ್​ ಟ್ರೋಫಿ ಪಡೆದುಕೊಂಡಿತು. ಧಾರವಾಡದ ಎಸ್​ಡಿಎಂ ಇಂಜಿನಿಯರಿಂಗ್​ ಕಾಲೇಜು ಮತ್ತು ತಾಂತ್ರಿಕ ಕಾಲೇಜು ರನ್ನರ್​ ಅಪ್​ ಪಡೆಯಿತು.
ಬ್ರೈಟ್​ ಎಜುಕೇಶನ್​ ಟ್ರಸ್ಟ್​ ಕಾರ್ಯದರ್ಶಿ ಬಸವರಾಜ ಲಿಂಗಶೆಟ್ಟರ್​, ಕಾರ್ಯಕ್ರಮ ಸಂಯೋಜಕ ಪ್ರೊ. ದೀಪಕ್​ ಎನ್​, ಅಧ್ಯಾಪಕರು ಪಾಲ್ಗೊಂಡಿದ್ದರು.
ಇವೆಂಟ್​ ವಿಜೇತರು ಮತ್ತು ರನ್ನರ್​ -ಅಪ್​ಗಳು ಕೆಳಗಿನಂತಿವೆ:
ಫಿಂಗರ್ಡಿಯನ್ಸ್- ಕೆಎಲ್​ಇ ಟೆಕ್​ ವಿಶ್ವವಿದ್ಯಾಲಯ ಪ್ರಥಮ, ರನ್ನರ್​ -ಅಪ್​ ಎಸ್​ಡಿಎಂ ಇಂಜಿನಿಯರಿಂಗ್​ ಮತ್ತು ತಂತ್ರಜ್ಞಾನ ಕಾಲೇಜು.
ಆಲ್ಫಾ ಎಡ್ಜ್​: ಕೆಎಲ್​ಇ ಟೆಕ್​ ವಿವಿ ವಿಜೇತರು, ರನ್ನರ್​-ಅಪ್​ ಎಸ್​ಡಿಎಂ ಇಂಜಿನಿಯರಿಂಗ್​ ಮತ್ತು ತಂತ್ರಜ್ಞಾನ ಕಾಲೇಜು.