ಹುಬ್ಬಳ್ಳಿಯ ಉಣಕಲ್ mock drill ಕೆರೆಯಲ್ಲಿ ಗುರುವಾರ ಏರ್ಪಡಿಸಿದ್ದ ಧಾರವಾಡ ಜಿಲ್ಲೆಯಲ್ಲಿ ಪ್ರವಾಹದ ಮುನ್ನೆಚ್ಚರಿಕೆ ಕುರಿತ ಕಲ್ಪಿತ ಪ್ರದರ್ಶನದಲ್ಲಿ ವ್ಯಕ್ತಿಯೊಬ್ಬರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದರು. 
ಧಾರವಾಡ

mock drill ಸಾರ್ವಜನಿಕರಿಗೆ ಪ್ರವಾಹ ಕುರಿತ ಜಾಗೃತಿ ಅಗತ್ಯ

ಹುಬ್ಬಳ್ಳಿ: ಧಾರವಾಡ mock drill ತಾಲೂಕಿನಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಸೇರಿದಂತೆ ಉಪ ಹಳ್ಳಗಳು ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಿಯುತ್ತವೆ. ಧಾರವಾಡ ಜಿಲ್ಲೆಯ 56 ಗ್ರಾಮಗಳಲ್ಲಿ ಮಿಂಚಿನ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಧಾರವಾಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ಆರ್. ಸ್ನೇಹಲ್ ತಿಳಿಸಿದರು.
ಉಣಕಲ್ ಕೆರೆಯಲ್ಲಿ ಗುರುವಾರ ಏರ್ಪಡಿಸಿದ್ದ ಧಾರವಾಡ ಜಿಲ್ಲೆಯಲ್ಲಿ ಪ್ರವಾಹದ ಮುನ್ನೆಚ್ಚರಿಕೆ ಕುರಿತ ಕಲ್ಪಿತ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳ, ಉಪ ಹಳ್ಳಗಳಿಂದ ಪ್ರವಾಹಕ್ಕೆ ಒಳಗಾಗುತ್ತವೆ. ಸುಮಾರು 8 ಸಾವಿರಕ್ಕೂ ಅಧಿಕ ಜನರು ಹಾಗೂ 3 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಪ್ರವಾಹಕ್ಕೆ ಒಳಗಾಗಬಹುದು ಎಂದರು.
ಜಿಲ್ಲಾ ವಿಪತ್ತು ನಿರ್ವಹಣಾ ವಿಭಾಗದ ಪರಿಣಿತ ವೆಂಕಟೇಶ ಬುಳ್ಳಾ ಮಾತನಾಡಿ, ಜಿಲ್ಲೆಯಲ್ಲಿ ರಕ್ಷಣಾ ತಂಡಗಳು ಮತ್ತು 4 ಬೋಟು, 50 ಲೈಫ್ ಜಾಕೆಟ್, 60 ಲೈಫ್ ಬಾಯ್, 150 ರೇನ್ ಕೋಟ್ ಸೇರಿದಂತೆ ರಕ್ಷಣಾ ಸಾಮಗ್ರಿಗಳನ್ನು ಸಿದ್ಧತೆ ಮಾಡಿಟ್ಟುಕೊಳ್ಳಲಾಗಿದೆ ಎಂದರು.
ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ ವೇಳೆ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕೆಂಬುದರ ಕುರಿತು ಡಾ. ನೀಲಾ ಕಾಸಿನಕುಂಟೆ ಮತ್ತು ಡಾ. ಅನೀಶ್ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಆರ್. ಸ್ನೇಹಲ್ ಸೇರಿದಂತೆ ಇತರ ಅಧಿಕಾರಿಗಳು ಬೋಟಿಂಗ್‌ನಲ್ಲಿ ಪಯಣಿಸುವ ಮೂಲಕ ಉಣಕಲ್ ಕೆರೆಯ ಸೌಂದರ್ಯ ಕಣ್ತುಂಬಿಕೊಂಡರು.
ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿಎಚ್‌ಒ ಡಾ. ಪರಶುರಾಮ, ಡಿಸಿಪಿ ಶ್ರುತಿ ಎನ್.ಎಸ್., ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಬಸವರಾಜ ಜಿ.ಕೆ., ಹುಬ್ಬಳ್ಳಿ ಶಹರ ತಹಸೀಲ್ದಾರ್ ಮಹೇಶ ಗಸ್ತೆ, ಹುಬ್ಬಳ್ಳಿ ಇಒಗಳಾದ ಡಾ. ರಾಮಚಂದ್ರ ಹೊಸಮನಿ, ಗಂಗಾಧರ, ಟಿಎಚ್‌ಒ ಡಾ. ಹುಲಗೇಶ, ಉಣಕಲ್‌ನ ಆರ್.ಕೆ. ಕೊಕಾಟಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಚಿಕ್ಕಮಠ ಶಾಲೆ ವಿದ್ಯಾರ್ಥಿಗಳು ಇತರರಿದ್ದರು.