ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ (Mann Ki Baat) ಬಿಜೆಪಿ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ರವಿ ನಾಯಕ, ರಾಜು ಕಾಳೆ ಹಾಗೂ ಇತರರಿದ್ದರು. 
ಧಾರವಾಡ

ಮನ್ ಕಿ ಬಾತ್ (Mann Ki Baat) ವೀಕ್ಷಣೆಗೆ ಶಾಸಕ ಟೆಂಗಿನಕಾಯಿ ಕರೆ

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ಹು-ಧಾ ಸೆಂಟ್ರಲ್ ಕ್ಷೇತ್ರವು ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದೆ.
  • ಅನುಭವಿ ಮುಖಂಡರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.
  • ಪ್ರಧಾನಿ ಮೋದಿ ಅವರ 128ನೇ ಮನ್ ಕಿ ಬಾತ್ ಕಾರ್ಯಕ್ರಮ.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಮೂರು ಬಾರಿಯ ಮನ್ ಕಿ ಬಾತ್ ವೀಕ್ಷಣೆಯಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರವು ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಬಾರಿಯೂ ಆ ಸ್ಥಾನ ಮುಂದುವರಿಯಬೇಕು ಎಂದರು.
ಡಿ. 6ರಂದು ಮತದಾರರ ಪರಿಷ್ಕರಣೆ ಎಸ್​ಐಆರ್ ಕಾರ್ಯಾಗಾರಕ್ಕೆ ಅನುಭವಿ ಮುಖಂಡರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜು ಕಾಳೆ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ಎಂ. ಐ. ನರಗುಂದ, ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ, ರವಿ ನಾಯಕ, ಕೃಷ್ಣ ಗಂಡಗಾಳೆಕರ, ರಾಮನಗೌಡ್ರ, ಪ್ರವೀಣ ಹುರಳಿ, ಅಶೋಕ ವಾಲ್ಮೀಕಿ, ಶಶಿ ರಂಗನವರ, ಲಿಂಗರಾಜ ಬೆಳಗಟ್ಟಿ, ಹರೀಶ ಜಂಗಲಿ ಹಾಗೂ ಇತರರು ಇದ್ದರು.