mla bellad ವಿಪಕ್ಷ ಉಪನಾಯಕ ಬೆಲ್ಲದ ಮನವಿ. 
ಧಾರವಾಡ

mla bellad ಉತ್ತರ ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ

ಪ್ರಮುಖ ಮುಖ್ಯಾಂಶಗಳು

  • ವಿಪಕ್ಷ ಉಪನಾಯಕ ಬೆಲ್ಲದ ಮನವಿ
  • ಅಧಿವೇಶನ ಅವಧಿ ವಿಸ್ತರಣೆ ಮಾಡಬೇಕು
  • ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕು
ಹುಬ್ಬಳ್ಳಿ: mla bellad ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿ ಕುರಿತು ಸಮಗ್ರ ಚರ್ಚೆ ನಡೆದು, ಕನಿಷ್ಠ 5 ಸಾವಿರ ಕೋಟಿ ರೂ. ಅನುದಾನ ಮೀಸಲಿಡಬೇಕು. ಅಗತ್ಯ ಬಿದ್ದರೆ ಇನ್ನೊಂದು ವಾರ ಅಧಿವೇಶನ ಅವಧಿ ವಿಸ್ತರಣೆ ಮಾಡಬೇಕು ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮುಖವಾಗಿ ಈ ಭಾಗದಲ್ಲಿ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ದುರಸ್ತಿ ಮಾಡಬೇಕಿದೆ. ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕಾಗಿದೆ. ಇದಕ್ಕಾಗಿ ಅನುದಾನ ನೀಡಬೇಕು ಎಂದರು.
ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್​ ಸರ್ಕಾರ ಜಾರಿಗೆ ತಂದ ಯೋಜನೆಗಳಿಂದ ಬಿಜೆಪಿ ಲಾಭ ಮಾಡಿಕೊಳ್ಳುವ ಯಾವುದೇ ಅಗತ್ಯ ಇಲ್ಲ. ಮನರೇಗಾ ಯೋಜನೆಯ ಹೆಸರು ಬದಲಾವಣೆಯಿಂದಲೂ ಯಾವ ಲಾಭ ಇಲ್ಲ. ಕಾಂಗ್ರೆಸ್​ ಅಂದಿನಿಂದಲೂ ಯೋಜನೆಗಳಿಗೆ ಇಂದಿರಾ ಗಾಂಧಿ, ರಾಜೀವ ಗಾಂಧಿ ಎಂದು ನಾಮಕರಣ ಮಾಡಿದೆ. ಆ ಯೋಜನೆಗಳಿಗೆ ಇರಿಸಿದ ಹೆಸರನ್ನು ಮೊದಲು ಬದಲಾವಣೆ ಮಾಡಬೇಕಿದೆ ಎಂದರು.