mission power ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಶಿಲ್ಪಾ ಎಂ. ಮಾತನಾಡಿದರು. ಡಾ. ಶಂಕರ ಚಕ್ರವರ್ತಿ, ಶ್ರೇಯಾ ಬೊಮ್ಮನಹಳ್ಳಿ ಉಪಸ್ಥಿತರಿದ್ದರು.
ಹುಬ್ಬಳ್ಳಿ: mission power ಮಕ್ಕಳು, ಮಹಿಳೆಯರ ಮೇಲೆ ಆಗುವ ದೌರ್ಜನ್ಯ ತಡೆಯಲು ಬಹಳಷ್ಟು ಸೌಲಭ್ಯ ಹಾಗೂ ಅವಕಾಶಗಳು ಇವೆ. ಅವುಗಳನ್ನು ಬಳಸಿಕೊಂಡು ತಮ್ಮ ರಕ್ಷಣೆಗೆ ಗಮನ ಕೊಡಬೇಕು. ಇಲಾಖೆ ಸದಾ ನಿಮ್ಮ ನೆರವಿಗೆ ಬರಲಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಶಿಲ್ಪಾ ಎಂ. ಹೇಳಿದರು.
ಇಲ್ಲಿಯ ವಿದ್ಯಾನಗರ ಐಬಿಎಂಆರ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಮಿಷನ್ ಶಕ್ತಿ ಯೋಜನೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸಹಾಯದಿಂದ ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕು. ಅಕ್ಕ ಪಡೆ ಸ್ಥಾಪನೆ ಮಾಡಲಾಗಿದ್ದು, ಯಾರಾದರೂ ಮಹಿಳೆಯರಿಗೆ ಅನುಚಿತ ವರ್ತನೆ ತೋರಿದರೆ ಪಡೆಗೆ ದೂರು ನೀಡಬಹುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಟಕದ ವತಿಯಿಂದ ಸುರಕ್ಷತೆ, ಭದ್ರತೆ ಸಬಲೀಕರಣಕ್ಕಾಗಿ ಅನುಷ್ಠಾನಗೊಳ್ಳುತ್ತಿರುವ ಕಾಯಿದೆ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಿಷನ್ ಶಕ್ತಿ ಯೋಜನೆ ಅಡಿಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಅಧೀಕ್ಷಕಿ ಶ್ರೇಯಾ ಬೊಮ್ಮನಹಳ್ಳಿ ಮಾತನಾಡಿ, ಕಳ್ಳಸಾಗಾಣಿಕೆ, ಸ್ಪಾ, ಮಸ್ಸಾಜ್ ಸೆಂಟರ್ಗಳಲ್ಲಿ ಅನೈತಿಕತೆ ಕಂಡು ಬಂದಲ್ಲಿ 112ಕ್ಕೆ ಕರೆ ಮಾಡಿ ದೂರು ನೀಡಬಹುದು. ದೌರ್ಜನ್ಯ ಎಸಗುವವರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಧ್ಯಾಪಕರು, ಪ್ರಶಿಕ್ಷಣಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ಶಂಕರ ಚಕ್ರವರ್ತಿ ಸ್ವಾಗತಿಸಿದರು. ಸಂಧ್ಯಾ, ಅಕ್ಷತಾ ಪ್ರಾರ್ಥನೆ ಹಾಡಿದರು. ವತ್ಸಲಾ ಮಡಿವಾಳರ ಕಾರ್ಯಕ್ರಮ ನಿರೂಪಿಸಿದರು. ಅಭಿಷೇಕ ಡಿ. ವಂದಿಸಿದರು.